ಬೆಂಗಳೂರು : ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೊ ವಿಮಾನದ ವಾಶ್ರೂಂನಲ್ಲಿ ಧೂಮಪಾನ ಮಾಡಿದ 20 ವರ್ಷದ ಪ್ರಯಾಣಿಕನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.
ಹದಿನೈದು ದಿನಗಳ ಅವಧಿಯಲ್ಲಿ ಇಂಡಿಗೊ ದಾಖಲಾದ ಎರಡನೇ ಪ್ರಕರಣ ಇದು.
ಶುಕ್ರವಾರ ಈ ಘಟನೆ ಸಂಭವಿಸಿದೆ.
ಅಸ್ಸಾಂ ಮೂಲದ ಸೆಹೆರಿ ಚೌಧುರಿ ಎಂಬ ಯುವಕ ವಾಶ್ರೂಮ್ನೊಳಗೆ ಸಿಗರೇಟ್ ಸೇದುತ್ತಿದ್ದ.
ಪ್ರಯಾಣಿಕರು ವಾಸನೆ ಮತ್ತು ಹೊಗೆಯನ್ನು ಕಂಡು ಕ್ಯಾಬಿನ್ ಸಿಬ್ಬಂದಿಗೆ ತಿಳಿಸಿದ್ದಾರೆ. ವಿಮಾನ ಲ್ಯಾಂಡ್ ಆದ ನಂತರ, ಫ್ಲೈಟ್ ಕ್ಯಾಪ್ಟನ್ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೂಡಲೇ ಚೌಧರಿಯನ್ನು ಬಂಧಿಸಲಾಗಿದೆ. ಮಾ.5 ರಂದು ಯುವತಿಯೊಬ್ಬಳು ವಾಶ್ರೂಮ್ನಲ್ಲಿ ಧೂಮಪಾನ ಮಾಡಿ ಸೆರೆಯಾಗಿದ್ದಳು.