ಸಂಶೋಧನಾ ವರದಿಯ ಪ್ರಕಾರ ಕೊರೊನಾ ವೈರಸ್‌ಗೆ ಮೂಲ ಕಾರಣ ನಾಯಿ ಮಾಂಸ

ನ್ಯೂಯಾರ್ಕ್ : ಮೂರು ವರ್ಷದಿಂದ ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ವೈರಸ್‌ಗೆ ಕಾರಣ ನಾಯಿ ಮಾಂಸ ಎಂದು ಸಂಶೋಧನಾ ವರದಿಯೊಂದು ಹೇಳುತ್ತಿದೆ. ಚೀನದ ವುಹಾನ್‌ನಲ್ಲಿರುವ ಲ್ಯಾಬ್‌ನಿಂದ ವೈರಸ್ ಸೋರಿಕೆಯಾಗಿದೆ ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಈಗ ಅಂತಾರಾಷ್ಟ್ರೀಯ ತಜ್ಞರ ತಂಡ ಚೀನದ ವುಹಾನ್ ಪ್ರಾಂತದ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟವಾಗುವ ಸೋಂಕಿತ ರಕೂನ್ ತಳಿಯ ನಾಯಿ ಮಾಂಸದಿಂದ ಕೋವಿಡ್ ಸೋಂಕು ಹರಡಿರುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ.

ವುಹಾನ್‌ ಮಾರುಕಟ್ಟೆಯಿಂದ 2020ರ ಜನವರಿಯಲ್ಲಿ ಅನುವಂಶಿಕ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಹುವಾನನ್ ಸಮುದ್ರಖಾದ್ಯ ಮಾರುಕಟ್ಟೆ ಮತ್ತು ಸುತ್ತಲಿನ ಪ್ರದೇಶಗಳಿಂದ ತೆಗೆದ ಸ್ರಾವ(ಗಂಟಲುದ್ರವ ಇತ್ಯಾದಿ)ದ ಆನುವಂಶಿಕ ಡೇಟಾವನ್ನು ಅಧ್ಯಯನ ತಂಡ ಸಂಗ್ರಹಿಸಿದೆ. ಇದನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಇಲ್ಲಿ ಮಾರಾಟ ಮಾಡುತ್ತಿದ್ದ ರಕೂನ್‌ ಪ್ರಾಣಿಯ ಮಾಂಸದಲ್ಲಿ ಸಾರ್ಸ್‌-ಕೊವ್‌-2 ವೈರಸ್‌ ಪತ್ತೆಯಾಗಿದೆ ಎಂದು ತಜ್ಞರ ತಂಡ ತಿಳಿಸಿದೆ.

ಮಾರುಕಟ್ಟೆಗೆ ಪ್ರಾಣಿಗಳನ್ನು ಸಾಗಿಸಲು ಬಳಸಲಾದ ಬೋನುಗಳು, ಗೂಡುಗಳು ಹಾಗೂ ಮಾರುಕಟ್ಟೆಯ ಗೋಡೆ, ನೆಲದಿಂದ ಈ ಸ್ರಾವಗಳನ್ನು ಸಂಶೋಧಕರು ಸಂಗ್ರಹಿಸಿದ್ದರು. ಸೋಂಕು ಉಲ್ಬಣಗೊಂಡಾಗ ಈ ಮಾರುಕಟ್ಟೆಯನ್ನು ಮುಚ್ಚಲಾಗಿತ್ತು. ಮಾದರಿಯ ಜೈವಿಕ ಅಂಶವನ್ನು ಪರೀಕ್ಷಿಸಿದಾಗ ಇದು ರಕೂನ್‌ ಪ್ರಾಣಿಗೆ ಸೇರಿರುವುದು ಹಾಗೂ ಇದರಲ್ಲಿ ಕೊರೊನಾ ವೈರಸ್‌ ಇರುವುದು ಬಹಿರಂಗವಾಗಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ
ತಜ್ಞರ ತಂಡದಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ, ಅಸ್ಟ್ರೇಲಿಯಾದ ಸಿಡ್ನಿ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ತಜ್ಞರು ಒಳಗೊಂಡಿದ್ದರು. ಈ ಸಂಶೋಧನೆಯು, ಕೋವಿಡ್ ಸೋಂಕು ಕಾಡುಪ್ರಾಣಿಗಳಿಂದ ಮನುಷ್ಯನಿಗೆ ಹರಡಿರುವ ಸಾಧ್ಯತೆ ಹೆಚ್ಚಿದೆ ಎಂಬುದನ್ನು ಬಹಿರಂಗಪಡಿಸಿದೆ. ಮಾರುಕಟ್ಟೆಯಲ್ಲಿ ಪ್ರಾಣಿಗಳು ಸೋಂಕು ಪೀಡಿತವಾಗಿರುವುದನ್ನು ಇದು ಬಲವಾಗಿ ಸೂಚಿಸಿದೆ ಎಂದು ಸಂಶೋಧಕರ ತಂಡದಲ್ಲಿದ್ದ ವಿಜ್ಞಾನಿ ಏಂಜೆಲಾ ರಸ್ಮುಸೆನ್ ಹೇಳಿದ್ದಾರೆ.































 
 

ಹುವಾನನ್ ಮಾರುಕಟ್ಟೆಗೆ ಮಾರಾಟಮಾಡಲು ಪ್ರಾಣಿಗಳನ್ನು ತಂದ ವ್ಯಕ್ತಿಯು ಕೋವಿಡ್ ಸೋಂಕಿತನಾಗಿರುವ ಸಾಧ್ಯತೆಯಿದೆ ಎಂದು ಚೀನಾದ ಸಂಶೋಧಕರು ಅಭಿಪ್ರಾಯಪಟ್ಟಿದ್ದರು. ಕಳೆದ ವಾರವಷ್ಟೇ ವುಹಾನ್‌ ವೈರಾಲಜಿ ಪ್ರಯೋಗಾಲಯದಿಂದ ಆಕಸ್ಮಿಕವಾಗಿ ವೈರಸ್‌ ಸೋರಿಕೆಯಾದ ಪರಿಣಾಮ ಜಗತ್ತಿನಾದ್ಯಂತ ಕೊರೊನಾ ಮಾರಿಗೆ ಕಾರಣವಾಯಿತು ಎಂದು ಅಮೆರಿಕ ಪ್ರತಿಪಾದಿಸಿತ್ತು. ಇದಲ್ಲದೆ ಈ ಹಿಂದೆ ಕೊರೋನಾ ವೈರಸ್ ಸಾಂಕ್ರಾಮಿಕ ಪ್ರಕೃತಿ ನಿರ್ಮಿತವಲ್ಲ. ಬದಲಿಗೆ ಅದು ಮಾನವ ನಿರ್ಮಿತ ವೈರಸ್ ಆಗಿದ್ದು, ಚೀನದ ವುಹಾನ್ ಲ್ಯಾಬ್‌ನಿಂದಲೇ ಅದು ಸೋರಿಕೆಯಾಗಿದೆ ಎಂದು ಲ್ಯಾಬ್‌ನಲ್ಲಿ ಕೆಲಸ ಮಾಡಿದ್ದ ಅಮೆರಿಕ ಮೂಲದ ವಿಜ್ಞಾನಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top