ಉಕ್ರೇನ್‌ನಿಂದ ಮಕ್ಕಳ ಅಪಹರಣದ ಆರೋಪ
ಮಾಸ್ಕೊ : ಅಂತರಾಷ್ಟ್ರೀಯ ಅಪರಾಧ ನ್ಯಾಯಾಲಯ (ಐಸಿಸಿ) ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿರುದ್ಧವೇ ಅರೆಸ್ಟ್ ವಾರೆಂಟ್ ಹೊರಡಿಸಿದೆ. ಉಕ್ರೇನ್‌ನಿಂದ ಮಕ್ಕಳ ಅಪಹರಣಕ್ಕೆ ಕಾರಣವಾದ ಯುದ್ಧ ಅಪರಾಧಗಳಿಗಾಗಿ ಈ ಬಂಧನ ವಾರೆಂಟ್ ಹೊರಡಿಸಲಾಗಿದೆ.
ದೇಶವೊಂದರ ಜನರನ್ನು ಕಾನೂನುಬಾಹಿರವಾಗಿ ಗಡಿಪಾರು ಮಾಡುವ ಯುದ್ಧ ಅಪರಾಧಕ್ಕೆ ಪುಟಿನ್ ಕಾರಣ. ಇದರೊಂದಿಗೆ ಉಕ್ರೇನ್‌ನ ಆಕ್ರಮಿತ ಪ್ರದೇಶಗಳಿಂದ ರಷ್ಯಾದ ಒಕ್ಕೂಟಕ್ಕೆ ಜನಸಂಖ್ಯೆಯನ್ನು (ಮಕ್ಕಳನ್ನು) ಕಾನೂನುಬಾಹಿರವಾಗಿ ವರ್ಗಾಯಿಸುವ ಯುದ್ಧ ಅಪರಾಧಕ್ಕೆ ಪುಟಿನ್ ಜವಾಬ್ದಾರರಾಗಿದ್ದಾರೆ ಎಂದು ಐಸಿಸಿ ಕೋರ್ಟ್ ತಿಳಿಸಿದೆ.
ರಷ್ಯಾ ಒಕ್ಕೂಟದ ಅಧ್ಯಕ್ಷರ ಕಚೇರಿಯಲ್ಲಿ ಮಕ್ಕಳ ಹಕ್ಕುಗಳ ಆಯುಕ್ತರಾದ ಮಾರಿಯಾ ಅಲೆಕ್ಸೆಯೆವ್ನಾ ಎಲ್ವೊವಾ-ಬೆಲೋವಾ ಅವರನ್ನು ಇದೇ ರೀತಿಯ ಆರೋಪಗಳ ಮೇಲೆ ಬಂಧಿಸಲು ಶುಕ್ರವಾರ ವಾರಂಟ್ ಹೊರಡಿಸಿದೆ.