ಪುತ್ತೂರು : ದಕ್ಷಿಣಕನ್ನಡಜಿಲ್ಲಾ ಖೊ-ಖೊ ಅಸೋಸಿಯೇನ್ ವತಿಯಿಂದ ಪುತ್ತೂರು ಅಲ್ಟಿಮೇಟ್ ಸ್ಪೋರ್ಟ್ಸ್‌ಕ್ಲಬ್ ಮತ್ತು ವಿವೇಕಾನಂದಕಾಲೇಜು ಸ್ವಾಯತ್ತ ಪುತ್ತೂರು, ದೈಹಿಕ ಶಿಕ್ಷಣ ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಯೋಗದೊಂದಿಗೆ ಪುತ್ತೂರಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪುರುಷರ ಲೀಗ್ ಮಾದರಿಯ ಖೋ-ಖೋ ಚಾಂಪಿಯನ್ ಶಿಪ್ ಸೀಸನ್ -1 2023 ವಿವೇಕಾನಂದ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು.
ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 12 ತಂಡಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನುಅಲ್ಟಿಮೇಟ್ ಸ್ಪೋರ್ಟ್ಸ್‌ಕ್ಲಬ್ ಪುತ್ತೂರುತಂಡ, ದ್ವಿತೀಯ ಬಹುಮಾನ ಜಿ ಎಫ್ ಜಿ ಸಿ ವಾಮದಪದವುತಂ, ತೃತೀಯ ಬಹುಮಾನ ವಿವೇಕಾನಂದ ಕಾಲೇಜು ಪುತ್ತೂರು ತಂಡ ಹಾಗೂ ಚತುರ್ಥ ಬಹುಮಾನವನ್ನು ಮಂಗಳೂರು ತಂಡ ಪಡೆದುಕೊಡಿದೆ. 5ನೇ ಸ್ಥಾನ ಜಿ ಎಫ್ ಜಿ ಸಿ ಉಪ್ಪಿನಂಗಡಿತಂಡ,6 ನೆ ಸ್ಥಾನ ಕೋಟಿ ಚೆನ್ನಯ ಕೊಕ್ಕೆಡಿ, 7 ನೆ ಸ್ಥಾನ ಎಸ್‌ಆರ್ ಸಿ ರಾಮಕುಂಜ, 8ನೇ ಸ್ಥಾನ ಪೋಲ್‌ಅಟ್ಟಾಕರ್ಸ್ ಪುತ್ತೂರುತಂಡ ಗಳಿಸಿಕೊಂಡಿದೆ.
ಅತ್ಯುತ್ತಮ ಚೇಸರ್ ಮಂಗಳೂರು ತಂಡದ ಚಂದು, ಅತ್ಯುತ್ತಮ ರಕ್ಷಣಾ ಆಟಗಾರ ಅಲ್ಟಿಮೇಟ್ ಸ್ಫೋರ್ಟ್ಸ್‌ಕ್ಲಬ್ನ ಕಾರ್ತಿಕ್‌ಎನ್, ಅತ್ಯುತ್ತಮ ಆಲ್ರೌಂಡರ್ ಜಿಎಫ್‌ಜಿಸಿ ವಾಮದಪದವುತಂಡದ ಸುಹಾಸ್, ಪಂದ್ಯಾವಳಿಯ ಶಿಸ್ತಿನ ಆಟಗಾರನಾಗಿ ವಿವೇಕಾನಂದ ಕಾಲೇಜ್ ತಂಡದ ಪುನೀತ್ ಮುಡಿಗೇರಿಸಿಕೊಂಡಿದ್ದಾರೆ.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪುತ್ತೂರಿನ ಖೋ-ಖೋ ಕ್ರೀಡೆಯನ್ನು ಬೆಳೆಸಿದ ಶಿಕ್ಷಕರಾದ ಮಾಧವಗೌಡ, ಜಗನ್ನಾಥ ರೈ, ವಸಂತಕುಮಾರ್, ಬಿ.ಕೆ ಮಾಧವ, ಗೀತಾಮಣಿ, ದಾಮೋದರ್, ಹರಿಣಾಕ್ಷಿ, ಎಸ್.ಡಿ.ರತ್ನಾವತಿ, ಡಾ.ಜ್ಯೋತಿಕುಮಾರಿ ಸೇಸಪ್ಪಗೌಡ, ರವಿಶಂಕರ್ ವಿ.ಎಸ್ ಮತ್ತು ಯತೀಶ್‌ಕುಮಾರ್ ಬಿ ಅವರನ್ನು ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದ ಅದ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಮಾತನಾಡಿ, ವಿವೇಕಾನಂದ ಕಾಲೇಜು ಹಲವಾರು ವರುಷಗಳಿಂದ ಖೋ ಖೋ ಸೇರಿದಂತೆ ಹಲವಾರು ಕ್ರೀಡಾಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿದೆ. ಅದರಲ್ಲೂ ಗ್ರಾಮೀಣ ಭಾಗದ ಕ್ರೀಡೆಗಳಿಗೆ ಹೆಚ್ಚಿನ ಆಸಕ್ತಿ ನೀಡಿ ಪ್ರೋತ್ಸಾಹಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಭಜರಂಗದಳದ ಪ್ರಾಂತ್ಯ ಸಹಸಂಯೋಜಕ ಮುರಳಿಕೃಷ್ಣ ಹಂಸತಡ್ಕ, ಪುತ್ತೂರು ವಕೀಲ ಮಚ್ಚಿಮಲೆ ವಿರೂಪಾಕ್ಷ, ಮುಳಿಯ ಜಿಮ್‌ನ ಫಿಟ್ನೆನೆಸ್ ಟ್ರೈನರ್ ಶ್ರೀಕೃಷ್ಣ, ರಾಣಿಬೆನ್ನೂರು ಸ.ಪ.ಪೂ ಕಾಲೇಜಿನ ಉಪನ್ಯಾಸಕ ಚಂದು ನಾಯ್ಕ, ಬೆಟ್ಟಂಪಾಡಿ ಸ.ಪ್ರ.ದ ಕಾಲೇಜಿನ ದೈ.ಶಿ.ನಿ ಡಾ.ಪೊಡಿಯ, ಮುಡಿಪು ಸ.ಪ್ರ.ದ ಕಾಲೇಜಿನ ದೈ.ಶಿ.ನಿ ಮಹಮ್ಮದ್ ರಫೀಕ್ ಕೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಾಲಕೃಷ್ಣ ಪೋರ್ದ್ವಾಲ್ ನಿರೂಪಿಸಿದರು.
ಬೆಳಿಗ್ಗೆ ಪಂದ್ಯಾಟದ ಉದ್ಘಾಟನೆಯನ್ನು ಉಪ್ಪಿನಂಗಡಿ ಎಸ್.ಬಿ.ಐಯ ನಿವೃತ್ತ ಉದ್ಯೋಗಿ ಜಿ.ಕೆ ಪೂವಪ್ಪ ಮತ್ತು ಹಳೇನೇರಂಕಿಯ ದೈವ ನರ್ತಕ ಓಬಯ್ಯ ಪರವನ್ ದೀಪ ಬೆಳಗಿಸಿ,ತೆಂಗಿನ ಕಾಯಿ ಒಡೆಯುವುದರ ಮೂಲಕ ನೆರವೆರಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರಿನ ಕಾರ್ಯದರ್ಶಿಯಾದ ಡಾ. ಕೆ ಎಂ ಕೃಷ್ಣ ಭಟ್‌ಅದ್ಯಕ್ಷತೆ ವಹಿಸಿ ಮಾತನಾಡಿ, ಪಂದ್ಯಾಟದ ಕಲ್ಪನೆ ಒಳ್ಳೆಯ ಪ್ರಯತ್ನ. ಈ ಆಟಕ್ಕೆ ಪರಿಶ್ರಮ ಹಾಗೂ ಸಾಮರ್ಥ್ಯಬೇಕು. ಒಗ್ಗಟ್ಟಿನಲ್ಲಿ ಕೆಲಸ ಮಾಡುವ ಮೂಲಕ ಏನನ್ನು ಸಾಧಿಸಬಹುದು ಎಂಬುದನ್ನು ಈ ಆಟದಲ್ಲಿ ನಾವು ಕಾಣಬಹುದು ಎಂದು ಹೇಳಿದರು.
ಉದ್ಘಾಟನಾ ಸಮಾರಂಭಕ್ಕೆ ಮುಖ್ಯಅತಿಥಿಯಾಗಿ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ ವಿ.ಗಣಪತಿ ಭಟ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಖೋ-ಖೋದಲ್ಲಿ ಎನ್.ಎಸ್.ಎನ್.ಐ.ಎಸ್ ಕೋಚಿಂಗ್ ಡಿಪ್ಲೋಮೋದಲ್ಲಿ ದೇಶದಲ್ಲಿ ಪ್ರಥಮ ಸ್ಥಾನ ಪಡೆದ ಪುತ್ತೂರಿನ ಕಾರ್ತಿಕ್ ಎನ್ ಅವರನ್ನು ವಿವೇಕಾನಂದ ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ.ಜ್ಯೋತಿಕುಮಾರಿ, ಯತೀಶ್ ಉಪಸ್ಥಿತರಿದ್ದರು.
ಅಲ್ಟಿಮೇಟ್ ಸ್ಪೋಟ್ಸ್ ಕ್ಲಬ್‌ನ ಸದಸ್ಯರಾದ ವಿನಯ ಕುಂಬ್ರಾ ಪ್ರಾರ್ಥಿಸಿದರು. ರಾಘವ ಸ್ವಾಗತಿಸಿ, ಹೇಮಂತ್ ವಂದಿಸಿದರು. ಅಜಯ್ ನಿರ್ವಹಿಸಿದರು.