ಪ್ರಧಾನಿ ಮೋದಿಗೆ ನೋಬೆಲ್‌ ಶಾಂತಿ ಪ್ರಶಸ್ತಿ…?

ಚರ್ಚೆಗೆ ಗ್ರಾಸವಾದ ನೋಬೆಲ್‌ ಕಮಿಟಿಯ ವೈಸ್‌ ಚೇರ್‌ ಆಗಿರುವ ಅಸ್ಲೆ ಟೋಜೆ ಹೇಳಿಕೆ

ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪ್ರತಿಷ್ಠಿತ ನೋಬೆಲ್‌ ಪ್ರಶಸ್ತಿ ಸಿಗಲಿದೆಯೇ? ಹೀಗೊಂದು ಪ್ರಶ್ನೆ ಈಗ ತೀವ್ರ ಚರ್ಚೆಗೆ ಒಳಪಟ್ಟಿದೆ. ಈ ಚರ್ಚೆ ಹುಟ್ಟು ಹಾಕಿದ್ದು ನೋಬೆಲ್‌ ಕಮಿಟಿಯ ವೈಸ್‌ ಚೇರ್‌ ಆಗಿರುವ ಅಸ್ಲೆ ಟೋಜೆ ಮಾಡಿರುವ ಒಂದು ಟ್ವೀಟ್‌. ಜಾಗತಿಕವಾಗಿ ಮೋದಿಯವರ ಜನಪ್ರಿಯತೆ ಹೆಚ್ಚಾಗುತ್ತಿದೆ. ರಷ್ಯಾ-ಯುಕ್ರೇನ್‌ ಸಮರ, ಜಾಗತಿಕ ಬಿಕ್ಕಟ್ಟುಗಳ ವಿಚಾರದಲ್ಲಿ ಪ್ರಧಾನಿ ಮೋದಿಯವರ ನಿಲುವು ಮತ್ತು ಮಾತುಗಳು ಜಗತ್ತಿನ ಮುಂಚೂಣಿ ರಾಷ್ಟ್ರಗಳಲ್ಲಿ ಸಂಚಲನ ಮೂಡಿಸಿವೆ.
ಈಗ ಜಿ20 ಅಧ್ಯಕ್ಷತೆಯೂ ಭಾರತಕ್ಕೆ ಲಭಿಸಿದ್ದು, ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಅಧ್ಯಕ್ಷತೆಯ ಹೊಣೆಗಾರಿಕೆಯೂ ಇರುವ ಕಾರಣ ಮೋದಿಯವರ ನಡೆ, ನುಡಿ ಮತ್ತು ಯೋಜನೆಗಳಿಗೆ ಹೆಚ್ಚಿನ ಪ್ರಾಮು‍ಖ್ಯತೆ ಲಭ್ಯವಾಗಿದೆ.

ಜಾಗತಿಕ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಭಾರತ, ಪ್ರಧಾನಿ ಮೋದಿ ಏನು ಹೇಳುತ್ತಾರೆ ಅವರ ಪ್ರತಿಕ್ರಿಯೆ ಏನು ಎಂಬುದನ್ನು ಜಗತ್ತಿನ ಮುಂಚೂಣಿ ನಾಯಕರು ಗಮನಿಸುತ್ತಿದ್ದಾರೆ.
ಅಸ್ಲೆ ಟೋಜೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಈಗ ಭಾರತ ಸೂಪರ್‌ ಪವರ್‌ ಆಗಿದೆ. ಪ್ರಪಂಚದ ರಾಜಕಾರಣದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ರಷ್ಯಾ ಮತ್ತು ಅಮೆರಿಕ ನಡುವಿನ ಶೀತಲ ಸಮರದ ನಡುವೆ, ಬೈಡೆನ್‌ ಮತ್ತು ಪುಟಿನ್‌ ನಡುವಿನ ಆಕ್ರೋಶ ಶಮನಗೊಳಿಸುವ ಶಾಂತಿದೂತರಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಕಂಡುಬಂದಿದ್ದಾರೆ ಎಂಬುದನ್ನು ಉಲ್ಲೇಖಿಸಿದ್ದಾರೆ. ಅವರ ಈ ಮಾತುಗಳು ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಮೇಗ್‌ ಅಪ್ಡೇಟ್ಸ್‌ ಎಂಬ ಟ್ವಿಟರ್‌ ಖಾತೆ ಇದನ್ನು ಕಿರು ಸುದ್ದಿಯನ್ನಾಗಿ ಕೂಡ ಬಿತ್ತರಿಸಿದೆ.































 
 

ಪ್ರಧಾನಿ ನರೇಂದ್ರ ಮೋದಿಯವರು ನೋಬೆಲ್ ಶಾಂತಿ ಪುರಸ್ಕಾರಕ್ಕೆ ಅರ್ಹರು ಎಂದು ನೊಬೆಲ್ ಪ್ರಶಸ್ತಿ ಸಮಿತಿಯ ಉಪ ನಾಯಕ ಆಸ್ಲೆ ಟೋಜೆ ಹೇಳಿದ್ದಾರೆ. ನಾವು ನೊಬೆಲ್ ಶಾಂತಿ ಪ್ರಶಸ್ತಿಗೆ ಹೆಚ್ಚಿನ ಸಂಖ್ಯೆಯ ಭಾರತೀಯ ನಾಮನಿರ್ದೇಶನಗಳನ್ನು ಪಡೆಯುತ್ತಿದ್ದೇವೆ. ನೋಬೆಲ್ ಶಾಂತಿ ಪ್ರಶಸ್ತಿಗೆ ಅಗತ್ಯವಿರುವ ಕೆಲಸವನ್ನು ವಿಶ್ವದ ಪ್ರತಿಯೊಬ್ಬ ನಾಯಕರು ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಮೋದಿಯಂತಹ ಪ್ರಬಲ ನಾಯಕರಿಗೆ ಶಾಂತಿ ಸ್ಥಾಪಿಸುವ ಅಗಾಧ ಸಾಮರ್ಥ್ಯವಿದೆ. ಪ್ರಧಾನಿ ಮೋದಿ ಅತ್ಯಂತ ಶಕ್ತಿಶಾಲಿ ದೇಶದಿಂದ ಬಂದವರು, ಅವರನ್ನು ತುಂಬಾ ಗಂಭೀರವಾಗಿ ಪರಿಗಣಿಸಲಾಗಿದೆ. ಅವರಲ್ಲಿ ಅಪಾರವಾದ ವಿಶ್ವಾಸಾರ್ಹತೆ ಇದೆ ಎಂದು ಹೇಳಿದ್ದಾರೆ.
ಭಾರತವನ್ನು ಶಾಂತಿಯ ಪರಂಪರೆ ಎಂದು ಕರೆದ ಆಸ್ಲೆ ಟೋಜೆ, ದೇಶವು ಜಗತ್ತಿನ ಸೂಪರ್ ಪವರ್ ಆಗುವತ್ತ ಮುನ್ನಡೆದಿದೆ ಎಂದು ಹೇಳಿದರು. ಇದಲ್ಲದೆ, ಪ್ರಧಾನಿ ಮೋದಿ ಅವರು ಯುದ್ಧವನ್ನು ನಿಲ್ಲಿಸಲು ಅತ್ಯಂತ ವಿಶ್ವಾಸಾರ್ಹ ನಾಯಕರಾಗಿದ್ದಾರೆ ಮತ್ತು ಅವರು ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯ ಎಂದು ಹೇಳಿದರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top