ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ಗೆ ಬೆಸ್ಟ್ ಬ್ಯಾಂಕ್ ಬ್ಯುಸಿನೆಸ್ ಅವಾರ್ಡ್-2023

ಪುತ್ತೂರು: ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯವರು ನಡೆಸಿದ ಟೈಮ್ಸ್ ಬ್ಯುಸಿನೆಸ್ ಆವಾರ್ಡ್ಸ್ ಮೈಸೂರು 2023 ಇದರಲ್ಲಿ ಬೆಸ್ಟ್ ಬ್ಯಾಂಕರ್ ಇನ್ ರೂರಲ್ ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ ಟೈಮ್ಸ್ ಬೆಸ್ಟ್ ಬ್ಯಾಂಕ್ ಬ್ಯುಸಿನೆಸ್ ಆವಾರ್ಡ್ ಲಭಿಸಿದೆ.

ಮೈಸೂರು ಸೈಲೆಂಟ್ ಸ್ಪಾದಲ್ಲಿ ಮಾ.14 ರಂದು ನಡೆದ ಟೈಮ್ಸ್ ಬ್ಯುಸಿನೆಸ್ ಆವಾರ್ಡ್ 2023 ಸಮಾರಂಭದಲ್ಲಿ ಖ್ಯಾತ ತೆಲುಗು ಚಿತ್ರನಟಿ ರಾಶಿ ಸಿನ್ಹಾರವರು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟುರವರಿಗೆ ಬೆಸ್ಟ್ ಬ್ಯಾಂಕ್ ಆವಾರ್ಡ್ ವಿತರಿಸಿದರು.

ಸಮೀಕ್ಷೆಯಲ್ಲಿ ಎಸ್‍ಸಿಡಿಸಿಸಿ ಬ್ಯಾಂಕ್‍ ಗ್ರಾಮೀಣ ಭಾಗದಲ್ಲಿ ಉತ್ಕೃಷ್ಟ ಬ್ಯಾಂಕಿಂಗ್ ಸೇವೆಯನ್ನು ಪರಿಗಣಿಸಿ ಟೈಮ್ಸ್ ಬಿಸಿನೆಸ್ ಅವಾರ್ಡ್ -2023 ಪ್ರಶಸ್ತಿಯನ್ನು ಪಡೆದಿದೆ. ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಾರಥ್ಯದಲ್ಲಿ ಎಸ್‍ಸಿಡಿಸಿಸಿ ಬ್ಯಾಂಕ್‍ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳೊಂದಿಗೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಜನಸಾಮಾನ್ಯರ ಸೇವೆಯಲ್ಲಿ ನಿರಂತರ ತೊಡಗಿಸಿಕೊಂಡಿರುವ ಬ್ಯಾಂಕ್‍ ಜನಸ್ನೇಹಿ ಬ್ಯಾಂಕ್‍ ಎನಿಸಿಕೋಂಡಿದೆ.







































 
 

ಭಾರತ ಸರಕಾರದ ಮಹತ್ವಾಕಾಂಕ್ಷೆಯ ಅಟಲ್ ಪಿಂಚಣಿ ಯೋಜನೆಯನ್ನು ಸಮರ್ಪಕವಾಗಿ ಜ್ಯಾರಿಗೆ ತರುವಲ್ಲಿ  ಬ್ಯಾಂಕ್‍ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಈ ಯೋಜನೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಚಂದದಾರರನ್ನು ನೋಂದಾಯಿಸಿದ ಬ್ಯಾಂಕ್‍ ವರದಿ ವರ್ಷದಲ್ಲಿ ಎರಡು ಬಾರಿ ಭಾರತ ಸರಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯಿಂದ ಪ್ರಶಸ್ತಿಗೆ ಪಾತ್ರವಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top