ಪುತ್ತೂರು :,ಶಿಕ್ಷಣ ವೃತ್ತಿಯು ಮಕ್ಕಳನ್ನು ತಿದ್ದುವ ಒಂದು ಅಭೂತಪೂರ್ವ ವೇದಿಕೆಯಾಗಿದೆ. ಸಮಾಜವನ್ನು ತಿದ್ದಲು ಹಾಗೂ ಮಕ್ಕಳ ಜೀವನ ಸರಿಪಡಿಸಲು ಶಿಕ್ಷಕ ವೃತ್ತಿ ಒಂದು ಪ್ರಮುಖ ವೃತ್ತಿ. ಶಿಕ್ಷಕನಾದವನು ಮಕ್ಕಳಿಂದ ಏನನ್ನು ನಿರೀಕ್ಷಿಸಬಾರದು. ಅವರ ಮನೋಭಾವವನ್ನು ಅರ್ಥೈಸಿಕೊಂಡು ಅವರೊಂದಿಗೆ ಬೆರೆಯಬೇಕು ಎಂದು ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಹರೀಶ್ ಶಾಸ್ತ್ರಿ ಹೇಳಿದರು.
ವಿವೇಕಾನಂದ ಮಹಾವಿದ್ಯಾಲಯ(ಸ್ವಾಯತ್ತ)ದ ಭವಿಷ್ ಘಟಕ ಹಾಗೂ ಐಕ್ಯೂಎಸಿ ಘಟಕಗಳ ಜಂಟಿ ಆಶ್ರಯದಲ್ಲಿ ನಡೆದ ’ನಾನು ಯಾಕೆ ಅಧ್ಯಾಪಕ ವೃತ್ತಿ ಆಯ್ದುಕೊಂಡೆ’ ಎಂಬ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು.
ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ನರಸಿಂಹ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಳ್ಳೆಯ ಶಿಕ್ಷಕನಾಗಬೇಕಾದರೆ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಓದು ವಿದ್ಯಾರ್ಥಿಗಳಿಗೂ ಶಿಕ್ಷಕರಿಗೂ ತುಂಬಾ ಅಗತ್ಯ. ಒಳ್ಳೆಯ ಮಾರ್ಗದರ್ಶನ ಪಡೆದುಕೊಂಡು ಕೆಟ್ಟತನವನ್ನು ಬಿಟ್ಟು ನಮ್ಮತನವನ್ನು ರೂಢಿಸಿಕೊಂಡಾಗ ಭವಿ?ದಲ್ಲಿ ಉತ್ತಮ ಶಿಕ್ಷಕನಾಗಲು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಭವಿಷ್ ಘಟಕದ ಸಂಯೋಜಕಿ ಲಾವಣ್ಯ, ಐಕ್ಯೂಎಸಿ ಘಟಕದ ಸಂಯೋಜಕ ಪ್ರೊ.ಶಿವಪ್ರಸಾದ್ ಕೆ.ಎಸ್ ಉಪಸ್ಥಿಪರಿದ್ದರು. ವಿದ್ಯಾರ್ಥಿನಿ ವಸುಧಾ.ಕೆ ಸ್ವಾಗತಿಸಿ, ಸ್ವಾತಿ ವಂದಿಸಿದರು. ಕವನ ಶಂಕರಿ.ಕೆ ನಿರ್ವಹಿಸಿದರು.