ಪುತ್ತೂರು:-ಹತ್ತೂರಿನಲ್ಲೂ ಹೆಸರು ಪಡೆದ ಊರು ಪುತ್ತೂರು. ಇಲ್ಲಿನ ವಿದ್ಯಾವಂತ ಯುವ ಸಮೂಹ ಪುತ್ತೂರಿನ ಹೆಮ್ಮೆ.ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಪ್ರಗತಿಯ ಹಾದಿಯಲ್ಲಿ ಸಾಗುವ ಶೈಕ್ಷಣಿಕ,ಸಮಾಜಮುಖಿ ಕಾರ್ಯವನ್ನು ಪ್ರಗತಿಯ ಸ್ಟಡಿ ಸೆಂಟರ್ ಮಾಡುತ್ತಿದೆ ಎಂದು ಜಿ.ಎಲ್.ಆಚಾರ್ಯ ಸಂಸ್ಥೆಯ ಮುಖ್ಯಸ್ಥ ಬಲರಾಮ ಆಚಾರ್ಯ ಹೇಳಿದರು.
ಅವರು ಇಲ್ಲಿಯ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ಆಫ್ಟರ್ ಪಿಯುಸಿ ವಾಟ್ ನೆಕ್ಟ್ಸ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿರು.
ಮುಖ್ಯ ಅತಿಥಿಯಾಗಿ ನಗರಸಭೆ ಉಪಾಧ್ಯಕ್ಷೆ ವಿದ್ಯಾಗೌರಿ ಮಾತನಾಡಿ, ಪ್ರಗತಿ ಸಂಸ್ಥೆಯು ಯಾವುದೇ ವಿದ್ಯಾಲಯ ಮಾಡದೇ ಇರುವ ಕಾರ್ಯವನ್ನು ಮಾಡುವ ಮೂಲಕ ಮಕ್ಕಳನ್ನು ಭವಿಷ್ಯದತ್ತ ಕೊಂಡೊಯ್ಯುವ ಹೊಸ ದಿಕ್ಕನ್ನು ತೋರಿಸುವ ಕಾರ್ಯಮಾಡುತ್ತಿದೆ ಎಂದರು.
ಬೆಂಗಳೂರಿನ ಸ್ಕೈಬರ್ಡ್ ಏವಿಯೇಶನ್ ಸಂಸ್ಥೆಯ ಪ್ರಾಂಶುಪಾಲ ಕೆಂಪರಾಜು ಬಿ.ಜೆ ಲಭ್ಯವಿರುವ ವಿವಿಧ ಕೋರ್ಸುಗಳ ಮಾಹಿತಿ ನೀಡಿ, ನಮ್ಮ ವಿದ್ಯಾರ್ಥಿಗಳು ನಮ್ಮ ರಾಷ್ಟ್ರದ ಭವಿಷ್ಯ.ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವುದು ನಮ್ಮ ಜವಾಬ್ದಾರಿಯಾಗಿದೆ.ಈ ನಿಟ್ಟಿನಲ್ಲಿ ಪುತ್ತೂರು ಪ್ರಗತಿ ಸ್ಟಡಿ ಸೆಂಟರಿನ ಮುಖ್ಯಸ್ಥರಾಗಿರುವ ಗೋಕುಲ್ ನಾಥ್ ಪಿ.ವಿ,ದಂಪತಿ ಅಭಿನಂದನೀಯರು. ಎಂದರು.
ಕಾರ್ಯಕ್ರಮದಲ್ಲಿ ಸ್ಕೈಬರ್ಡ್ ಏವಿಯೇಷನ್ ಸಂಸ್ಥೆಯ ಸಹಾಯಕ ಪ್ರೊಫೆಸರ್ ಮಂಜುಕಿರಣ್ ವಿವಿಧ ಕೋರ್ಸುಗಳ ಮಾಹಿತಿ ನೀಡಿದರು.
ಪುತ್ತೂರು ಸುದ್ದಿಬಿಡುಗಡೆಯ ಸಿಇಒ ಸೃಜನ್ ಉಪಸ್ಥಿತರಿದ್ದರು. ಪ್ರಗತಿ ಸ್ಟಡಿ ಸೆಂಟರಿನ ಸ್ಥಾಪಕಾಧ್ಯಕ್ಷ,ಮುಖ್ಯಸ್ಥ ಗೋಕುಲ್ ನಾಥ್ ಪಿ.ವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆ ಸ್ಕೈಬರ್ಡ್ ಏವಿಯೇಷನ್ ಪುತ್ತೂರಿಗೆ ಬಂದು ಏಯರ್ ಲೈನ್ಸ್ ಹಾಗೂ ಏಯರ್ ಪೋರ್ಟ್ ಕುರಿತ ವಿವಿಧ ಕೋರ್ಸ್ ಗಳ ಕುರಿತು ಮಾಹಿತಿ ನೀಡಿರುವುದು ವಿದ್ಯಾರ್ಥಿಗಳ ಮುಂದಿನ ಬದುಕಿಗೆ ಕೈದೀವಿಗೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ಕೈಬರ್ಡ್ ಏವಿಯೇಶನ್ ಸಂಸ್ಥೆಯ ಸಿಬ್ಬಂದಿಗಳಾದ ಉಷಾಮೂರ್ತಿ, ಮಲ್ಲಪ್ಪ, ಪುತ್ತೂರು ಮಧುಪ್ರಪಂಚ ಪತ್ರಿಕೆಯ ಪ್ರಧಾನ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ, ಪ್ರಗತಿ ಸ್ಟಡಿ ಸೆಂಟರಿನ ಪ್ರಾಂಶುಪಾಲೆ ಹೇಮಲತಾ ಗೋಕುಲ್ ನಾಥ್, ಮುಖ್ಯ ಶಿಕ್ಷಕಿ ಪ್ರಮೀಳಾ ಎನ್.ಡಿ., ಉಪನ್ಯಾಸಕ ವೃಂದ,ವಿದ್ಯಾರ್ಥಿ ವೃಂದ,ಪೋಷಕರು,ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಖುಷಿ ಮತ್ತು ಮಿನೀಷ ರ್ಥಿಸಿದರು. ಉಪನ್ಯಾಸಕಿ ಶುಭ ಕಾರ್ಯಕ್ರಮ ನಿರೂಪಿಸಿದದರು. ಉಪನ್ಯಾಸಕಿ ಹರ್ಷಿತಾ ಸ್ವಾಗತಿಸಿದರು. ಉಪನ್ಯಾಸಕಿ ಕಾವ್ಯ ವಂದಿಸಿದರು.