ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸದ್ದಿಲ್ಲದೆ ಏರಿಕೆಯಾಗುತ್ತಿದೆ. ಇದರ ನಡುವೆ ಹೆಚ್3ಎನ್2 ಭೀತಿ ಕೂಡ ಹೆಚ್ಚಿದ್ದು, ರಾಜ್ಯದಲ್ಲಿ ಪ್ರಸ್ತುತ ಕಳೆದ 82 ದಿನಗಳಲ್ಲಿ 115 ಹೆಚ್3ಎನ್2 ಪ್ರಕರಣಗಳು ಪತ್ತೆಯಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ 21 ಜಿಲ್ಲೆಗಳಲ್ಲಿ H3N2 ಸೋಂಕು ಪತ್ತೆಯಾಗಿದ್ದು, ರಾಜಧಾನಿಯಲ್ಲಿ 30 ಪ್ರಕರಣಗಳು ದಾಖಲಾಗಿವೆ.
ಬಿಬಿಎಂಪಿ ವ್ಯಾಪ್ತಿ-30, ಶಿವಮೊಗ್ಗ-19, ಧಾರವಾಡ-14, ಮೈಸೂರು-09, ವಿಜಯಪುರ-08, ಬೆಳಗಾವಿ-05, ಹಾಸನ-05, ತುಮಕೂರು-03, ದಾವಣಗೆರೆ-03, ಹಾವೇರಿ-03, ದಕ್ಷಿಣ ಕನ್ನಡ-03, ಬೆಂಗಳೂರು ಗ್ರಾಮಾಂತರ-02, ಗದಗ-02, ರಾಮನಗರ-02, ಚಾಮರಾಜನಗರ-01, ಬಾಗಲಕೋಟೆ-01, ಉತ್ತರ ಕನ್ನಡ-01, ಚಿತ್ರದುರ್ಗ-01, ಚಿಕ್ಕಮಗಳೂರು- 01, ಕೊಡಗು- 01, ಮಂಡ್ಯ-01 ಪ್ರಕರಣ ಪತ್ತೆಯಾಗಿದೆ.