ರೋಟರಿ ಕ್ಲಬ್ ಪುತ್ತೂರು ಸೆ೦ಟ್ರಲಿನಿಂದ ಬಾಲವನ ಅಂಗನವಾಡಿಗೆ ನೀರಿನ ಘಟಕ ಕೊಡುಗೆ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆ೦ಟ್ರಲಿನಿಂದ ಶಿವರಾಮ ಕಾರಂತರ ಬಾಲವನ ಅಂಗನವಾಡಿ ಕಟ್ಟಡಕ್ಕೆ ಸಂಪೂರ್ಣ ಪೈ೦ಟ್ ಕೆಲಸ ಪೂರ್ತಿಗೊಳಿಸಿ, ಬಾಲವನ ಅಂಗನವಾಡಿಗೆ ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಕೊಡುಗೆ ಯೋಜನೆಯನ್ನು ರೋಟರಿ ಜಿಲ್ಲೆ 3181 ವಲಯ 5ರ  ಅಸಿಸ್ಟೆ೦ಟ್ ಗವರ್ನರ್ ಎ. ಜಗಜೀವನ್ ದಾಸ್ ರೈ ಉದ್ಘಾಟಿಸಿದರು.

ರೋಟರಿ ಸೆ೦ಟ್ರಲ್ ಅದ್ಯಕ್ಷ ಮೊಹಮ್ಮದ್ ರಫೀಕ್ ದರ್ಬೆ ಅಧ್ಯಕ್ಷತೆ ವಹಿಸಿದ್ದರು.

ಅಂಗನವಾಡಿಗೆ ರೋಟರಿ ಮೂಲಕ ನೀರಿನ ಘಟಕ ಮತ್ತು ಸುಣ್ಣ ಬಣ್ಣ ಬಳಿಯಲು ಸಹಕರಿಸಿದ ನಿವೃತ್ತ ಉಪನ್ಯಾಸಕ ದಿ. ಜನಾರ್ದನ ಪಿ.ಯವರ ಕುಟುಂಬಿಕರ ಸಹಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು. ಫೆಬ್ರವರಿ ಹದಿನಾಲ್ಕನೇ ತಾರೀಕಿನಂದು ದಿ. ಜನಾರ್ದನ ಪಿ ಹೆಸರಲ್ಲಿ ರೋಟರಿ ಕ್ಲಬ್ ಸೆ೦ಟ್ರಲ್ ಮೂಲಕ ಸಾಲ್ಮರ ಸರಕಾರಿ ಶಾಲೆಗೆ ನೀರಿನ ಘಟಕವನ್ನು ನೀಡಿರುವುದನ್ನು  ಮತ್ತು ರೋಟರಿ ಸೆ೦ಟ್ರಲ್ ಮೂಲಕ ಕಳೆದ ತಿಂಗಳು ಬಾಲವನಕ್ಕೆ ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಘಟಕವನ್ನು ಹರ್ಷಕುಮಾರ್ ರೈ ಯವರು ರೋಟರಿ ಕ್ಲಬ್ ಸೆ೦ಟ್ರಲ್ ಮೂಲಕ ನೀಡಿರುವುದನ್ನು  ಸ್ಮರಿಸಿ ಅಭಿನಂದಿಸಲಾಯಿತು.







































 
 

ರೋಟರಿ ಕ್ಲಬ್ 3181 ವಲಯ  5  ವಲಯ ಸೇನಾನಿ ಹರ್ಷಕುಮರ್ ರೈ, ಸ್ಥಳಿಯ ನಗರಸಭಾ ಸದಸ್ಯೆ ದೀಕ್ಷಾ ಪೈ, ರೋಟರಿ ಸೆ೦ಟ್ರಲ್ ನ ಕಾರ್ಯದರ್ಶಿ ಚಂದ್ರಹಾಸ ರೈ. ಬಿ, ನಿಯೋಜಿತ ಅದ್ಯಕ್ಷ ಡಾ. ರಾಜೇಶ್ ಬೆಜ್ಜಂಗಳ, ಪೂರ್ವಾಧ್ಯಕ್ಷ  ನವೀನ್ ಚಂದ್ರ ನಾಯ್ಕ್, ಸ್ಥಾಪಕಾದ್ಯಕ್ಷ ಸಂತೋಷ್ ಶೆಟ್ಟಿ, ಕೋಶಾಧಿಕಾರಿ ಡಾ. ರಾಮಚಂದ್ರ , ಸಾರ್ಜೆಂಟ್‌ ಜಯಪ್ರಕಾಶ್ ಅಮೈ, ಪುರುಷೋತ್ತಮ ಶೆಟ್ಟಿ, ಉಪಕಾರ್ಯದರ್ಶಿ ಜಯಪ್ರಕಾಶ್ ಎ ಎಲ್., ಕ್ಲಬ್ ಸರ್ವಿಸ್ ಚಯರ್ಮೇನ್ ಅಶ್ರಫ಼್ ಮುಕ್ವೆ, ಸದಸ್ಯ ಪ್ರದೀಪ್ ಪೂಜಾರಿ, ಅಂಗನವಾಡಿ ಟೀಚರ್ ಗೀತಾ, ಅಂಗನವಾಡಿ ಸಹಾಯಕಿ ಸುಮ, ಪೊಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ರೋಟರಿ ಸೆ೦ಟ್ರಲ್  ಕಾರ್ಯದರ್ಶಿ ಚಂದ್ರಹಾಸ ರೈ ಕಾರ್ಯಕ್ರಮ ನಿರೂಪಿಸಿ, ಪುರುಷೋತ್ತಮ  ಶೆಟ್ಟಿ ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top