ಜನಸಾಮಾನ್ಯರ ಭಾವನೆಯನ್ನು ವ್ಯಕ್ತಪಡಿಸಿದ್ದೇನೆ ಎಂದು ಸ್ಪಷ್ಟನೆ
ಮಂಗಳೂರು: ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಆಜಾನ್ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ತಾನು ಸಾಮಾನ್ಯ ಜನರ ಭಾವನೆಗಳನ್ನು ವ್ಯಕ್ತಪಡಿಸಿದ್ದಾಗಿ ಹೇಳಿದ್ದಾರೆ.
ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಆಜಾನ್ ಕೇಳಿದಾಗ ತೊಂದರೆಯಾಗುತ್ತದೆ. ಯಾವುದೇ ಧರ್ಮವನ್ನು ಖಂಡಿಸುವ ಉದ್ದೇಶವಿಲ್ಲ. ಆದರೆ ಯಾರಾದರೂ ಸಾಮಾನ್ಯ ಜನರ ಭಾವನೆಗಳಿಗೆ ಧ್ವನಿ ನೀಡಬೇಕು. ಇದು ಧರ್ಮವನ್ನು ಖಂಡಿಸುವುದಲ್ಲ ಎಂದು ಹೇಳಿದ್ದಾರೆ.
ಮಂಗಳೂರಿನ ಕಾವೂರಿನಲ್ಲಿ ಭಾನುವಾರ ನಡೆದ ಬಿಜೆಪಿ ಸಮಾವೇಶದ ವೇಳೆ ಆಝಾನ್ ಮೊಳಗಿದಾಗ ಸಿಡಿಮಿಡಿಗೊಂಡಿದ್ದ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈಶ್ವರಪ್ಪ ಅವರು ವಿಜಯ್ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾಗ ಸಮೀಪದಲ್ಲಿದ್ದ ಮಸೀದಿಯಿಂದ ಆಝಾನ್ ಕೂಗಲಾಗಿದೆ. ಇದರಿಂದ ಸಿಟ್ಟಾದ ಅವರು, ನಾನು ಎಲ್ಲಿಗೆ ಹೋದರೂ, ಇದು ನನಗೆ ತಲೆನೋವು ತರುತ್ತದೆ ಎಂದಿದ್ದರು.
ಸುಪ್ರೀಂ ಕೋರ್ಟ್‌ನ ತೀರ್ಪು ಬಾಕಿಯಿದೆ. ಆಜಾನ್ ಮುಂದೊಂದು ದಿನ ಕೊನೆಗೊಳ್ಳುತ್ತದೆ. ಆಜಾನ್ ಸಮಯದಲ್ಲಿ ಧ್ವನಿವರ್ಧಕಗಳನ್ನು ಬಳಸಿದರೆ ಮಾತ್ರ ಅಲ್ಲಾಹನು ಪ್ರಾರ್ಥನೆಯನ್ನು ಕೇಳುತ್ತಾನೆಯೇ. ದೇವಾಲಯಗಳಲ್ಲಿ ಮಹಿಳೆಯರು ಪ್ರಾರ್ಥನೆ ಮತ್ತು ಭಜನೆಗಳನ್ನು ಮಾಡುತ್ತಾರೆ. ನಾವು ಧಾರ್ಮಿಕರು, ಆದರೆ ನಾವು ಧ್ವನಿವರ್ಧಕಗಳನ್ನು ಬಳಸುವುದಿಲ್ಲ ಅಂತ ಹೇಳಿದ್ದಾರೆ.