ಭೋಪಾಲ್ ಅನಿಲ ದುರಂತ: ಕೇಂದ್ರ ಸರ್ಕಾರದ ಹೆಚ್ಚುವರಿ ಪರಿಹಾರ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ದೆಹಲಿ: 1984ರ ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಅಮೆರಿಕ ಮೂಲದ ಯೂನಿಯನ್ ಕಾರ್ಬೈಡ್ ಕಾರ್ಪೊರೇಶನ್‌ನಿಂದ ಹೆಚ್ಚುವರಿ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಜಸ್ಟಿಸ್ ಸಂಜಯ್ ಕಿಶನ್ ಕೌಲ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಇತ್ಯರ್ಥದ ಎರಡು ದಶಕಗಳ ನಂತರ ಈ ಸಮಸ್ಯೆಯನ್ನು ತರಲು ಕೇಂದ್ರದಿಂದ ಯಾವುದೇ ತರ್ಕವಿಲ್ಲ ಎಂದು ಹೇಳಿದೆ. ಸಂತ್ರಸ್ತರಿಗಾಗಿ ಆರ್‌ಬಿಐ ಬಳಿ ಇರುವ 50 ಕೋಟಿ ರೂಪಾಯಿಯನ್ನು ಸಂತ್ರಸ್ತರ ಬಾಕಿ ಇರುವ ಕ್ಲೈಮ್‌ಗಳನ್ನು ಪೂರೈಸಲು ಯೂನಿಯನ್ ಆಫ್ ಇಂಡಿಯಾ ಬಳಸಿಕೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ಅನಿಲ ದುರಂತದಲ್ಲಿ 3000ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಪರಿಸರಕ್ಕೆ ಭಾರಿ ಹಾನಿಯಾಗಿತ್ತು. 1989ರ ಪ್ರಕರಣದ ಇತ್ಯರ್ಥದ ಸಂದರ್ಭದಲ್ಲಿ ಮಾನವ ಜೀವನ ಮತ್ತು ಪರಿಸರಕ್ಕೆ ಉಂಟಾದ ನಿಜವಾದ ಹಾನಿಯ ಅಗಾಧತೆಯನ್ನು ಸರಿಯಾಗಿ ನಿರ್ಣಯಿಸಲು ಸಾಧ್ಯವಾಗಿರಲಿಲ್ಲ ಎಂದು ಸರ್ಕಾರ ವಾದಿಸಿತ್ತು. ಆದರೆ, ಸರ್ಕಾರದ ವಾದವನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಎಸ್‌.ಕೆ. ಕೌಲ್ ನೇತೃತ್ವದ ಐವರು ನ್ಯಾಯೂರ್ತಿಗಳ ಪೀಠವು, ವಂಚನೆ ನಡೆದಿದ್ದಲ್ಲಿ ಮಾತ್ರ ಪರಿಹಾರ ನಿರ್ಣಯವನ್ನು ಕೈಬಿಡಬಹುದು. ಆದರೆ, ಇಲ್ಲಿ ಯಾವುದೇ ವಂಚನೆಯ ಕಾರಣವನ್ನು ಸರ್ಕಾರ ನೀಡಿಲ್ಲ ಎಂದು ಹೇಳಿದೆ. ಡಿಸೆಂಬರ್ 2 ಮತ್ತು 3, 1984 ರ ಮಧ್ಯರಾತ್ರಿಯಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ವಿಷಕಾರಿ ಮೀಥೈಲ್ ಐಸೊಸೈನೇಟ್ ಅನಿಲ ಸೋರಿಕೆಯಾದ ನಂತರ 1989 ರಲ್ಲಿ 3,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು 1.02 ಲಕ್ಷ ಜನರು ಗಾಯಗೊಂಡು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದರು. ನಂತರ ಈಗ ಈ ಸಂಸ್ಥೆ ಡೌ ಕೆಮಿಕಲ್ಸ್ ಒಡೆತನದ ಯುಸಿಸಿ 470 ಮಿಲಿಯನ್ ಡಾಲರ್ ಪರಿಹಾರವನ್ನು ನೀಡಿತು.

ದುರಂತದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರವನ್ನು ನೀಡಲು ಯೂನಿಯನ್ ಕಾರ್ಬೈಡ್ ಕಾರ್ಪೊರೇಶನ್‌ ಒಡೆತನದ ಸಂಸ್ಥೆಯಿಂದ ಹೆಚ್ಚುವರಿ 7,844 ಕೋ. ಟಿ ರೂ ಕೊಡಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು. ‘ಎರಡು ದಶಕಗಳ ನಂತರ ಈ ಸಮಸ್ಯೆಯನ್ನು ಪ್ರಸ್ತಾಪಿಸಿರುವ ಕೇಂದ್ರ ಸರ್ಕಾರವು ಯಾವುದೇ ತಾರ್ಕಿಕ ಆಧಾರಗಳನ್ನು ನೀಡದಿರುವ ಬಗ್ಗೆ ಅತೃಪ್ತಿ ಇದೆ. ಹೆಚ್ಚುವರಿ ಪರಿಹಾರಕ್ಕೆ ಕೇಂದ್ರವು ಇಟ್ಟಿರುವ ಬೇಡಿಕೆಯಲ್ಲಿ ಕಾನೂನಿಗೆ ಪೂರಕವಾದ ಯಾವುದೇ ಆಧಾರವಿಲ್ಲ. ಸಂತ್ರಸ್ತರಿಗೆ ಪರಿಹಾರದ ಕೊರತೆಯ ಬಗ್ಗೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಪೀಠ, ಭಾರತೀಯ ರಿಸರ್ವ್ ಬ್ಯಾಂಕ್ ಬಳಿ ಇರುವ 50 ಕೋಟಿ ರೂ ಅನ್ನು ಕೇಂದ್ರ ಸರ್ಕಾರವು ಬಾಕಿ ಉಳಿದಿರುವ ಕ್ಲೈಮ್‌ಗಳನ್ನು ಪೂರೈಸಲು ಬಳಸಿಕೊಳ್ಳಬೇಕು ಎಂದು ಹೇಳಿದೆ. ಪ್ರಕರಣದ ಇತ್ಯರ್ಥದ ಸಮಯದಲ್ಲಿ ಪರಿಹಾರದ ಮೊತ್ತ ಅಸಮರ್ಪಕವಾಗಿದೆ ಎಂದು ಭಾರತ ಸರ್ಕಾರವು ಹೇಳಿಲ್ಲ ಎಂದು ಸಂಸ್ಥೆಯ ವಾದಿಸಿತ್ತು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top