ಅಂಬಿಕಾ ಸಿಬಿಎಸ್ ಇ ವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಪುತ್ತೂರು : ನಗರದ  ಅಂಬಿಕಾ ಸಿಬಿಎಸ್ ಇ ವಿದ್ಯಾಲಯದಲ್ಲಿ  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು.

 ಸಮಾರಂಭದಲ್ಲಿ ವಿದ್ಯಾಲಯದ ಹಿರಿಯ ಶಿಕ್ಷಕಿ ಹಾಗೂ ಉಪ ಪ್ರಾoಶುಪಾಲೆ ಸುಜನಿ ಬೋರ್ಕರ್ ರವರನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಸುಜನಿ ಬೋರ್ಕರ್, ಭಾರತೀಯ ಪರಂಪರೆಯಲ್ಲಿ ಸ್ತ್ರೀಯರಿಗೆ ಅಪಾರ ಗೌರವವಿದೆ. ಯತ್ರ ನಾರ್ಯಸ್ತು ಪೂಜ್ಯoತೆ ರಮಂತೆ ತತ್ರ ದೇವತಾ: ಎಂಬ ನುಡಿಯಂತೆ ಎಲ್ಲಿ ಸ್ತ್ರೀಯರನ್ನು ಪೂಜ್ಯ ಭಾವದಿಂದ ನೋಡುತ್ತಾರೋ, ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಯಾಗುತ್ತಾರೆ ಎಂಬುದು ನಮ್ಮೆಲ್ಲರ ನಂಬಿಕೆ. ಪ್ರತಿಯೊಂದು ಜೀವಿಯ ಹುಟ್ಟಿನಲ್ಲೂ ತಾಯಿಯ ಪಾತ್ರ ಮಹತ್ತರವಾದುದು. ಆದರೆ ಇತ್ತೀಚಿಗೆ ಸ್ತ್ರೀಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ ಮಾನವೀಯ ಸಬಂಧಗಳು ದೂರವಾಗುತ್ತಿವೆ. ಹಾಗಾಗಿ ಮಹಿಳೆಯೊಬ್ಬಳು ಅಬಲೆಯಲ್ಲ ಸಬಲೆ ಎಂಬುದನ್ನು ತೋರಿಸಿಕೊಡಬೇಕಾದ ಅಗತ್ಯವಿದೆ ಎಂದರು.







































 
 

ವೇದಿಕೆಯಲ್ಲಿ ವಿದ್ಯಾಲಯದ ಗೈಡ್ಸ್ ವಿಭಾಗದ ಶಿಕ್ಷಕಿ ಚಂದ್ರಕಲಾ ಉಪಸ್ಥಿತರಿದ್ದರು. ಸ್ಕೌಟ್ ವಿಭಾಗದ ಶಿಕ್ಷಕ ಸತೀಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.  ಬಳಿಕ ಸ್ಕೌಟ್ಸ್ ಮತ್ತು ಮಕ್ಕಳಿಗೆ ವಿಶೇಷವಾಗಿ ” ಮಹಿಳೆ ” ಎಂಬ ವಿಚಾರದಲ್ಲಿ ಬರವಣಿಗೆ ನೀಡಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top