ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ವಲಯದ ವತಿಯಿಂದ ಸಾಮೆತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶೌಚಾಲಯಕ್ಕೆ 50 ಸಾವಿರ ರೂ. ಮಂಜೂರಾತಿ ಪತ್ರವನ್ನು ಹಸ್ತಾಂತರಿಸಲಾಯಿತು.
ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಹಾಗೂ ಯೋಜನಾಧಿಕಾರಿ ಆನಂದ್, ಮುಖ್ಯ ಶಿಕ್ಷಕ ಮರಿಯ ಹಾಗೂ ಟ್ರಸ್ಟ್ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಸಾಮೆತ್ತಡ್ಕ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಲಾ ಟ್ರಸ್ಟ್ ಸದಸ್ಯ ದಿನೇಶ್ ಕಾಮತ್, ಸಾಮೆತ್ತಡ್ಕ ಒಕ್ಕೂಟದ ಅಧ್ಯಕ್ಷೆ ಅಹಲ್ಯ, ಎಸ್ ಡಿಎಂಸಿ ಉಪಾಧ್ಯಕ್ಷೆ ಪವಿತ್ರ, ಮೇಲ್ವಿಚಾರಕಿ ಯೋಗೀಶ್ವರಿ, ಸೇವಾಪ್ರತಿನಿಧಿ ರಜನಿ ಉಪಸ್ಥಿತರಿದ್ದರು.