ಪುತ್ತೂರು: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ 2022-23ನೇ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ 7 ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ 13 ರ್ಯಾಂಕ್ ಗಳು ಲಭಿಸಿದೆ.
ಬಿಸಿಎ ಪದವಿ ವಿಭಾಗದಲ್ಲಿ ಫಾತಿಮತ್ ಸಾನಿದ 97.4% ಅಂಕ ಗಳೊಂದಿಗೆಪ್ರಥಮ ರ್ಯಾಂಕ್, ಬಿಎಸ್ಸಿ ವಿಭಾಗದಲ್ಲಿ ಧೀರಜ್ ಎಂ. 97.94% ಅಂಕಗಳೊಂದಿಗೆ 3ನೇ ರ್ಯಾಂಕ್, ಶ್ರೀಶ ಎಂ. ಬಿಎಸ್ಸಿವಿಭಾಗದಲ್ಲಿ 97.82% ಅಂಕಗಳನ್ನು ಪಡೆದು 5ನೇ ರ್ಯಾಂಕ್, ಬಿಬಿಎ ವಿಭಾಗದ ಹರ್ಷಿತ ಕೆ. 91.14% ಅಂಕಗಳೊಂದಿಗೆ 5ನೇ ರ್ಯಾಂಕ್, ಬಿಕಾಂ ವಿಭಾಗದಲ್ಲಿ ಶ್ರೀದೇವಿ ಕೆ. 94.71% ಅಂಕಗಳನ್ನುಪಡೆದು 6ನೇ ರ್ಯಾಂಕ್, ಬಿಕಾಂ ವಿಭಾಗದಲ್ಲಿ ಪ್ರತಿಮಾ ಎ. 94.57% ಅಂಕ ಗಳಿಸಿ 7 ನೇ ರ್ಯಾಂಕ್, ನಿಶಾಪ್ರಭಾ ಎನ್ 93.89% ಅಂಕಗಳನ್ನುಪಡೆದು10ನೇ ರ್ಯಾಂಕ್, ಸ್ನಾತಕೋತ್ತರ ಗಣಕ ವಿಜ್ಞಾನ ವಿಭಾಗದಲ್ಲಿ ದೀಪ್ತಿ ವಿ. 9.19 ಸಿಜಿಪಿಎ ಯೊಂದಿಗೆ ಪ್ರಥಮ ರ್ಯಾಂಕ್, ಎಂಕಾಂ ವಿಭಾಗದಲ್ಲಿ ಕಾಲೇಜಿಗೆ ಒಟ್ಟು11 ರ್ಯಾಂಕ್ ಗಳು ದೊರೆತಿವೆ. ಅನ್ಶ 8.57ಸಿಜಿಪಿಎಯೊಂದಿಗೆ 2ನೇ ರ್ಯಾಂಕ್, ಅಪೂರ್ವ ಪಿ.ವಿ. 8.47 ಸಿಜಿಪಿಎ ಪಡೆದು 3ನೇ ರ್ಯಾಂಕ್, ವಿನೋಲಿಯಾ ಜಸ್ಲಿನ್ ಮಿನೇಜಸ್ 8.47 ಸಿಜಿಪಿಎ ಪಡೆದು 3ನೇ ರ್ಯಾಂಕ್, ಶ್ಲಾಘ್ಯ ಆಳ್ವ ಕೆ. 8.43 ಸಿಜಿಪಿಎ ಪಡೆದು 4ನೇ ರ್ಯಾಂಕ್, ಶ್ರಾವ್ಯ ಎನ್ ಕೆ 8.43 ಸಿಜಿಪಿಎ ಪಡೆದು 4ನೇ ರ್ಯಾಂಕ್, ಶ್ರೀಲಕ್ಷ್ಮಿ ಭಟ್ ಕೆ . 8.43 ಸಿಜಿಪಿಎ ಪಡೆದು 4ನೇ ರ್ಯಾಂಕ್, ಬಾಸಿಲ 8.4 ಸಿಜಿಪಿಎ ಗಳಿಸಿ 5ನೇ ರ್ಯಾಂಕ್, ಸಿ ಎಸ್.ಜಯಶ್ರೀ 8.4 ಸಿಜಿಪಿಎ ಗಳಿಸಿ 5ನೇ ರ್ಯಾಂಕ್, ಚೈತ್ರಾ ಬಿ. 8.4 ಸಿಜಿಪಿಎ ಗಳಿಸಿ 5ನೇ ರ್ಯಾಂಕ್, ಹರಿಣಿ ಎಸ್ ಪೈ 8.33 ಸಿಜಿಪಿಎ ಗಳಿಸಿ 7ನೇ ರ್ಯಾಂಕ್, ಹರ್ಷಿತ ಎಸ್. 8.23 ಸಿಜಿಪಿಎ ಗಳಿಸಿ 10ನೇ ರ್ಯಾಂಕ್, ಜೋತ್ಸ್ನಾ ಸಿ.ಜೆ 8.23 ಸಿಜಿಪಿಎ ಗಳಿಸಿ10ನೇ ರ್ಯಾಂಕ್, ಕೃಪಾಲಿ ಕೆ.ಪಿ.ಅವರಿಗೆ ಬಿಎಸ್ಸಿ (ಬಿಝಡ್ ಸಿ) ವಿಭಾಗದಲ್ಲಿ ಡಾ|ಟಿ.ಎಂ.ಎ. ಪೈ ಸ್ವರ್ಣ ಪದಕ ಲಭಿಸಿರುತ್ತದೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಡಾ.ಆಂಟನಿ ಪ್ರಕಾಶ್ ಮೊಂತೆರೋ ಸಂತಸ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.