ಪುತ್ತೂರು : ನಗರದ ಧರ್ಮಸ್ಥಳ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಬೆಂಗಳೂರಿನ ಪ್ರತಿಷ್ಠಿತ ಪದವಿ ಕಾಲೇಜು ಸ್ಕೈಬರ್ಡ್ ಏವಿಯೇಶನ್ ವತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಉತ್ತೀರ್ಣಗೊಂಡ ಬಳಿಕ ವಿಮಾನಯಾನದಲ್ಲಿ ಮೂರು ವರ್ಷಗಳ ಪದವಿ, ಎರಡು ವರ್ಷಗಳ ಸ್ನಾತಕೋತ್ತರ ಪದವಿ ಬಗ್ಗೆ ಮಾ.14 ಮಂಗಳವಾರ ಉಚಿತವಾಗಿ ಕಾರ್ಯಾಗಾರ ನಡೆಯಲಿದೆ.
ಬಿಬಿಎ ಇನ್ ಏವಿಯೇಶನ್ ಮ್ಯಾನೇಜ್‌ಮೆಂಟ್ ವಿದ್ ಹಾನರ್‍ಸ್ ಮಲ್ಟಿ ಡಿಸಿಪ್ಲಿನರಿ ಎಜ್ಯುಕೇಶನ್ ವಿದ್ ಮಲ್ಟಿ ಎಂಟ್ರಿ ಮಲ್ಟಿ- ಎಕ್ಸಿಟ್ ಏಸ್ ಪರ್ ಎನ್‌ಇಪಿ, ಇಂಟರ್ ನ್ಯಾಷನ್ ಡಿಪ್ಲೋಮಾ ಇನ್ ಏಯರ್‍ಲೈನ್ ಆಂಡ್ ಏಯರ್ ಪೋರ್‍ಟ್ ಒಪರೇಷನ್, ಕ್ಯಾಬಿನ್ ಕ್ರೀವ್/ಏಯರ್ ಹಾಸ್ಟೆಸ್ ಟ್ರೈನಿಂಗ್, ಎಂಬಿಎ ಇನ ಏರ್ ಲೈನ್ ಆಂಡ್ ಏಯರಪೋರ್‍ಟ್ ಮ್ಯಾನೇಜ್‌ಮೆಂಟ್, ಎ ಇಂಟರ್ ನ್ಯಾಷನಲ್ ಡಿಪ್ಲೋಮಾ ಮತ್ತು ಟಾಟಾ ಫೌಂಡೇಶನ್ ಕೋರ್ಸ್ 6 ತಿಂಗಳ: ಕೋರ್ಸ್‌ಗಳ ಕುರಿತು ಮಾಹಿತಿ ನೀಡಲಾಗುವುದು.
ಆದ್ದರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಸಂಚಾಲಕ ಗೋಕುಲ್ ನಾಥ್ ಪಿ.ವಿ. ಹಾಗೂ ಪ್ರಾಂಶುಪಾಲೆ ಹೇಮಲತಾ ಗೋಕುಲ್ ನಾಥ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ..