ಪುತ್ತೂರು: ಪಾಣಾಜೆ ಗ್ರಾಮದ ನಿಡ್ಪಳ್ಳಿ ಶ್ರೀಶಾಂತಾದುರ್ಗ ದೇವಸ್ಥಾನಕ್ಕೆ ರೋಟರಿ ಕ್ಲಬ್ ಪುತ್ತೂರು ಯುವದ ವಲಯ ಸೇನಾನಿ ಡಾ|ಹರ್ಷ ಕುಮಾರ್ ರೈ ಮಾಡಾವುರವರು ರೋಟರಿ ಜಲಸಿರಿ ಯೋಜನೆಗೆ ಪೂರಕವಾಗಿ ಸಾರ್ವಜನಿಕ ಉದ್ದೇಶಕ್ಕೆ ಕುಡಿಯುವ ನೀರಿನ ಘಟಕವನ್ನು ಸಮರ್ಪಿಸಿದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಕುಮಾರ ನರಸಿಂಹ ಭಟ್, ಪ್ರಧಾನ ಅರ್ಚಕ ನವೀನ್ ಹೆಬ್ಬಾರ್, ಸುನಿಲ್ ಕುಮಾರ್ ರೈ ಕೊಪ್ಪಳ, ವಿಶ್ವೇಶ್ವರ ಭಟ್ ಮತ್ತು ಸಚಿತ್ ಕುಮಾರ್ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರೋಟರಿ ಜಿಲ್ಲಾ ಗವರ್ನರ್ ಶ್ಲಾಘನೆ:
ಪ್ರಸ್ತುತ ವರ್ಷದ ಮಹತ್ವಕಾಂಕ್ಷಿ ಯೋಜನೆ ರೋಟರಿ ಜಲಸಿರಿ ಯೋಜನೆಗೆ ಪೂರಕವಾಗಿ ಸಾರ್ವಜನಿಕ ಉದ್ದೇಶಕ್ಕೆ ಸುಮಾರು 35,೦೦೦ ಮೌಲ್ಯದ ಕುಡಿಯುವ ನೀರಿನ ಘಟಕವನ್ನು ಹಲವಾರು ಕಡೆ ನಿರಂತರವಾಗಿ ಕೊಡುಗೆ ನೀಡುತ್ತಿರುವ ಡಾ| ಹರ್ಷಕುಮಾರ್ ರೈ ಮಾಡಾವುರವರನ್ನು ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಶ್ಲಾಘಿಸಿದರು.