ಪುತ್ತೂರು: ಸದ್ದಿಲ್ಲದೇ ಅಭಿವೃದ್ಧಿ ಕಾರ್ಯ ನಡೆಸಿರುವ ಶಾಸಕ ಸಂಜೀವ ಮಠಂದೂರು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಅಭಿನಂದನೆಯ ಬರಹವೊಂದು ವೈರಲ್ ಆಗುತ್ತಿದೆ.
ಪರ್ಲಡ್ಕ – ದೇವಸ್ಯ ಮಾರ್ಗವಾಗಿ ಅಜ್ಜಿಕಲ್ಲು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೊಂಡಿದ್ದು, ಸುಲಲಿತ ಸಂಚಾರಕ್ಕೆ ಅನುಕೂಲವಾಗಿದೆ. ಈ ಹಿಂದೆ ತೀರಾ ಹದಗೆಟ್ಟು ಹೋಗಿದ್ದ ರಸ್ತೆಯನ್ನು ಶಾಸಕ ಸಂಜೀವ ಮಠಂದೂರು ಅವರ ಮುತುವರ್ಜಿ ವಹಿಸಿ ಸಂಚಾರ ಯೋಗ್ಯವಾಗಿಸಿದ್ದಾರೆ. ಬಹು ವಾಹನ ದಟ್ಟಣೆ ಹೊಂದಿರುವ ಪುತ್ತೂರು – ಸಂಪ್ಯ – ಸಂಟ್ಯಾರ್ ರಸ್ತೆಗೆ ಪರ್ಯಾಯ ಪರ್ಲಡ್ಕ – ದೇವಸ್ಯ ರಸ್ತೆ. 1.70 ಕೋಟಿ ರೂ. ವೆಚ್ಚದಲ್ಲಿ ಪರ್ಲಡ್ಕ – ದೇವಸ್ಯ ರಸ್ತೆ ಅಭಿವೃದ್ಧಿಗೊಂಡಿದೆ.
ಈ ರಸ್ತೆಯ ಫಲಾನುಭವಿಗಳಲ್ಲಿ ಓರ್ವರಾದ ಕಿರಣ ಶಂಕರ ಮಲ್ಯ ಅವರು, ಶ್ಲಾಘನೆಯ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಅವರೇ ಬರೆದಿರುವ ಬರಹ ಇಲ್ಲಿದೆ…
“ನಮ್ಮ ಊರಾದ ಇರ್ದೆಗೆ ಈಗ ನಾನಿರುವ ಪುತ್ತೂರಿನ ಬೊಳುವಾರಿನಿಂದ ಪ್ರತಿ ತಿಂಗಳ ಪಂಚಮಿ ಪೂಜೆಗೆ ಸಂಪ್ಯ – ಸಂಟ್ಯಾರ್ ಮಾರ್ಗವಾಗಿ ಇರ್ದೆಗೆ ಹೋಗುತ್ತಿದ್ದೆ. ಆದರೆ ಈಗ ಪರ್ಲಡ್ಕ – ದೇವಸ್ಯ ಮಾರ್ಗ ಮೂಲಕ ಅಜ್ಜಿಕಲ್ಲು ಆಗಿ ಇರ್ದೆಗೆ ಹೋಗುತ್ತಿದ್ದೇನೆ. ಎಷ್ಟೋ ಸಮಯ ಉಳಿತಾಯ ಮತ್ತು ವಾಹನ ದಟ್ಟಣೆಯ ಕಿರಿ ಕಿರಿ ಇಲ್ಲ.
ಧನ್ಯವಾದಗಳು ಪುತ್ತೂರಿನ ಶಾಸಕರಾದ ಸಂಜೀವಾಣ್ಣನವರೀಗೆ…
ಇತ್ತೀಚೆಗೆ ಅಂದರೆ ಮೊನ್ನೆ ಮಾರ್ಚ್ 3ರಂದು ಇರ್ದೆಯಲ್ಲಿ ನೇಮೋತ್ಸವ ಇತ್ತು. ರಾತ್ರಿ ಇದೇ ದೇವಸ್ಯ – ಅಜ್ಜಿಕಲ್ಲು ಮಾರ್ಗವಾಗಿ ಇರ್ದೆಗೆ ಹೋದದ್ದು ಬಹಳ ಬೇಗ ತಲುಪಿದ್ದೇವೆ.
ಬೇರೆ ಊರಿನ ಜನಪ್ರತಿನಿಧಿಗಳ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ನಾವು -ಅವರು ಒಳ್ಳೇಯ ಕೆಲಸ ಮಾಡಿದ್ದಾರೆಂದು ನಾಲ್ಕು ಜನರಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಉದ್ದುದ್ದ ಬರಿತೇವೆ. ಒಳ್ಳೇಯ ವಿಷಯ ಮುಂದುವರಿಯಲಿ. ಅದರ ಜೊತೆ ಜೊತೆಗೆ ನಮ್ಮೂರಿನ ಶಾಸಕರಾದ ಸಂಜೀವಣ್ಣನ ಒಳ್ಳೇಯ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆಯೂ ನಮ್ಮ ನಮ್ಮ ವಾಟ್ಸಪ್ ಸ್ಟೇಟಸ್ ಇನ್ನಿತರ ಸಾಮಾಜಿಕ ಜಾಲತಾಣದದಲ್ಲಿ ಪೋಸ್ಟ್ ಮಾಡೋಣಾ. ಇನ್ನೂ ಹೆಚ್ಚು ಅಭಿವೃದ್ಧಿ ಕೆಲಸಕಾರ್ಯಗಳು ಮಾಡುವಂತಾಗಲಿ ಎಂದು ಶ್ರೀ ಮಹಾಲಿಂಗೇಶ್ವರನಲ್ಲಿ ಪ್ರಾರ್ಥನೆ.”
-ಕಿರಣ ಶಂಕರ ಮಲ್ಯ