ಪುತ್ತೂರು: ನಗರ ಸಭೆ ವ್ಯಾಪ್ತಿಯ ಕಬಕ 2ನೇ ವಾರ್ಡಿನ ವಿವಿಧ ರಸ್ತೆಗಳಿಗೆ 22.50 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಶಿಲಾನ್ಯಾಸ ಕಾರ್ಯಕ್ರಮ ಭಾನುವಾರ ನಡೆಯಿತು.
ಶಾಸಕ ಸಂಜೀವ ಮಠಂದೂರು ತೆಂಗಿನಕಾಯಿ ಒಡೆಯುವ ಮೂಲಕ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಪುತ್ತೂರು ನಗರಸಭೆಗೆ ಏಕಕಾಲದಲ್ಲಿ 58 ಕೋಟಿ ರೂ. ಅನುದಾನ ನೀಡುವ ಕೆಲಸ ಆಗಿದ್ದು, ಜಲಸಿರಿ ಯೋಜನೆಯ ಅತೀ ದೊಡ್ಡ ಟ್ಯಾಂಕ್ ಸಿಟಿ ಗುಡ್ಡೆಯಲ್ಲಿ ಇದೆ. ಇಲ್ಲಿಗೆ 150 ಎಚ್ ಪಿ ಮೋಟಾರ್ ಮೂಲಕ ನೆಕ್ಕಿಲಾಡಿಯಿಂದ ನೀರು ಸರಬರಾಜು ಮಾಡುವ ಕೆಲಸ ಆಗಿದೆ. ಜತೆಗೆ ಪೌರಾ ಕಾರ್ಮಿಕರಿಗೆ ನಿವೇಶನಕ್ಕೆ ಜಾಗ ಕೊಡುವ ಕೆಲಸ ಆಗಿದೆ ಎಂದ ಅವರು, ಪಾರ್ಕ್ ಗಳ ಅಭಿವೃದ್ಧಿ ಕೆಲಸಗಳು ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ. ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ರಾಜಾರಾಮ್ ಪ್ರಭು, ವಸಂತ ಕರೆಕಾಡು, ಜಯರಾಮ್ ಸಿಟಿಗುಡ್ಡೆ, ಲಿಂಗಪ್ಪ ನಾಯ್ಕ್ ಅತುಲ್ ಕಲ್ಲೇಗ, ಹಾಗೂ ಪಲಾನುಭವಿಗಳು ಉಪಸ್ಥಿತರಿದ್ದರು.