ಪುತ್ತೂರು: ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ಆಶ್ರಯದಲ್ಲಿ ಏಳನೇ ವರ್ಷದ ಗುರುಪೂಜೆ, ಭಜನೆ, ಸನ್ಮಾನ ಕಾರ್ಯಕ್ರಮ ಮಾ12 ರಂದು ಕಲರ್ಪೆ ತರವಾಡು ಮನೆಯಲ್ಲಿ ನಡೆಯಿತು.
ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೂರ್ತೆಯ ಕಲಸ ಮಾಡುವುದನ್ನು ಯುವ ಪೀಳಿಗೆಗೆ ನಾವು ತಿಳಿಸುವ ಕೆಲಸ ಮಾಡಬೇಕು.ಸಮಾಜಕದಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಒಳ್ಳೆಯ ಕೆಲಸ ಬಿಲ್ಲವ ಸಮಾಜ ಮಾಡಿದೆ ಎಂದ ಅವರು, ಕೋಟಿ ಚೆನ್ನಯ ಹುಟ್ಟಿದ ಊರು ಪುತ್ತೂರಿನ ಬಸ್ಸು ತಂಗುಧಾಣಕ್ಕೆ ಕೋಟಿ ಚೆನ್ನಯ ನಾಮಕರಣ ಕಾರ್ಯಕ್ರಮ ಮಾರ್ಚ್ 26 ರಂದು ನಡೆಯಲಿದ್ದು, ಬಂಟ್ವಾಳ ತಾಲೂಕಿನ ನಾರಾಯಣ ಗುರು ಶಾಲೆಗೆ ಅನುದಾನ ಕೊಡುವ ಕೆಲಸ ಆಗಿದೆ.
ಪುತ್ತೂರು ಬಿಲ್ಲವ ಸಂಘದ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ ಮಾತನಾಡಿ, ಶಾಂತಿಗೋಡು ಗ್ರಾಮಕ್ಕೆ ಅತೀ ಹೆಚ್ಚು ಅನುದಾನ ಕೊಟ್ಟ ಶಾಸಕರು ಸಂಜೀವ ಮಠದೂರು ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ನಾಗೇಶ್ ಪೂಜಾರಿ ಸರಕಾರೆ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕೇಡೆಂಜಿ, ವಿದ್ಯಾನಿಧಿ ಸಂಚಾಲಕ ರೇಣುಕಾ ಕಾಣಿಯೂರು, ಕಲ್ಲರ್ಪೆ ತರವಾಡು ಮನೆ ಹಿರಿಯರಾದ ಎಲ್ಯಣ್ಣ ಪೂಜಾರಿ ಮುಂದೋಡಿ, ಪುತ್ತೂರು ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಕಲಾ ಮುಕ್ವೆ, ನರಿಮೊಗರು ವಲಯ ಸಂಚಾಲಕ, ಬಿಲ್ಲವ ಸಂಘ ಕೋಶಾಧಿಕಾರಿ ಬಿ. ಟಿ ಮಹೇಶ್ಚಂದ್ರ ಸಾಲ್ಯಾನ್ ನಡುಬೈಲ್, ಪುತ್ತೂರು ಯುವವಾಹಿನಿ ಅಧ್ಯಕ್ಷ ಉಮೇಶ್ ಬಾಯರ್, ಶಾಂತಿಗೋಡು ಗ್ರಾಮ ಸಮಿತಿ ಯುವವಾಹಿನಿ ಅಧ್ಯಕ್ಷ ರಾಘವ ಬೊಳ್ಳೆಕ್ಕು, ಶಾಂತಿಗೋಡು ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಆಶಾ ಸಚೀಂದ್ರ ಬೊಳ್ಳೆಕ್ಕು, ಶಾಂತಿಗೋಡು ಬಿಲ್ಲವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಾಕ್ಷ ಪೇರಡ್ಕ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಿಲ್ಲವ ಸಮಾಜದದಲ್ಲಿ ಸಾಧನೆ ಮಾಡಿದ ಮಹಿಳೆಯರು, ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಕ್ತ ದಾನ ಮಾಡಿದವರಿಗೆ ಪ್ರಮಾಣ ಪತ್ರ, ಪ್ರಶಸ್ತಿ ವಿತರಣೆ ನಡೆಯಿತು.