ಬಿಜೆಪಿ ನಿದ್ದೆಗೆಡಿಸಿದ, ಕಾಂಗ್ರೆಸ್‌ಗೆ ಖುಷಿ ಕೊಟ್ಟ ಸಮೀಕ್ಷೆ

ಜೆಡಿಎಸ್‌ ಸ್ಥಿತಿ ಆರಕ್ಕೇರುವುದಿಲ್ಲ ಮೂರಕ್ಕಿಳಿಯುವುದಿಲ್ಲ

ಬೆಂಗಳೂರು : ಮೂರೂ ಪಕ್ಷಗಳು 150ರ ಗುರಿ ಇಟ್ಟುಕೊಂಡು ಮತದಾರರ ಮನಗೆಲ್ಲಲು ಹಗಲಿರುಳು ಎನ್ನದೆ ಬೆವರು ಸುರಿಸುತ್ತಿವೆ. ಆದರೆ ಈ ನಡುವೆ ಮತದಾನೋತ್ತರ ಸಮೀಕ್ಷೆಗಳು ಮಾತ್ರ ಬೇರೆಯದ್ದೇ ಕಥೆ ಹೇಳುತ್ತಿವೆ. ಇದೀಗ ಲೋಕ್‌ಪೋಲ್‌ ಎಂಬ ಹೆಸರಿನಲ್ಲಿ ಸಂಸ್ಥೆಯೊಂದು ಮಾಡಿದ ಸಮೀಕ್ಷೆ ಜೆಡಿಎಸ್‌ ಮತ್ತು ಬಿಜೆಪಿಯ ನಿದ್ದೆಗೆಡಿಸಿದ್ದರೆ ಕಾಂಗ್ರೆಸ್‌ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಲೋಕ್‌ಪೋಲ್‌ ಸಮೀಕ್ಷೆ ಪ್ರಕಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸರಳ ಬಹುಮತ ಬರಲಿದೆ. ಕಾಂಗ್ರೆಸ್‌ 116 ರಿಂದ 122 ಸ್ಥಾನಗಳು ಪಡೆಯಬಹುದು ಎಂದು ಅಂದಾಜಿಸಲಾಗಿದ್ದು, ಈ ಸಮೀಕ್ಷೆಯನ್ನು ಆಧರಿಸಿಯೇ ಕಾಂಗ್ರೆಸ್ ಚುನಾವಣಾ ತಂತ್ರಗಾರಿಕೆಯನ್ನು ರೂಪಿಸುತ್ತಿದೆ.
ಆಡಳಿತರೂಢ ಬಿಜೆಪಿ 140ಕ್ಕೂ ಸ್ಥಾನಗಳನ್ನ ಗೆಲ್ಲುವ ವಿಶ್ವಾಸದಲ್ಲಿದ್ದರೂ ಸಮೀಕ್ಷೆಯ ಪ್ರಕಾರ ಸಿಗುವುದು ಬರೀ 77 ರಿಂದ 83 ಸ್ಥಾನ. ಜೆಡಿಎಸ್‌ಗೆ 21 ರಿಂದ 27 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಲಾಗಿದೆ. 1 ರಿಂದ 4 ಪಕ್ಷೇತರರು ಗೆಲುವು ಸಾಧಿಸಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಬಿಜೆಪಿಗೆ ಶೇ.33 ರಿಂದ 36ರಷ್ಟು ಮತಗಳು, ಕಾಂಗ್ರೆಸ್‌ಗೆ ಶೇ.39 ರಿಂದ 42 ಮತ ಸಿಗಬಹುದು. ಜೆಡಿಎಸ್‌ ಶೇ. 15 ರಿಂದ 18ರಷ್ಟು ಮತ ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಈ ಬಾರಿ ಹಳೆ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ಬಿಜೆಪಿಗೆ ನಿರಾಸೆ ಉಂಟಾಗಲಿದೆ.

ಲೋಕ್‌ಪೋಲ್‌ ಸಮೀಕ್ಷೆ ಪ್ರಕಾರ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ 10 ರಿಂದ 13 ಸ್ಥಾನ, ಕಾಂಗ್ರೆಸ್‌ಗೆ 21-24 ಹಾಗೂ ಜೆಡಿಎಸ್‌ಗೆ 14- 17 ಸ್ಥಾನಗಳು ಸಿಗಬಹುದು. ಕರಾವಳಿ ಭಾಗದಲ್ಲಿ ಬಿಜೆಪಿಗೆ 14 ರಿಂದ 17, ಕಾಂಗ್ರೆಸ್‌ಗೆ 7 ರಿಂದ 10 ಹಾಗೂ ಜೆಡಿಎಸ್‌ಗೆ 1 ಸ್ಥಾನ ದೊರಕಬಹುದು ಎನ್ನಲಾಗಿದೆ.
ಬಿಜೆಪಿಗೆ ಬೆಂಗಳೂರು ವ್ಯಾಪ್ತಿಯಲ್ಲೂ ಕಹಿ ಸುದ್ದಿ ಇದೆ. ಬೆಂಗಳೂರಿನಲ್ಲಿ ಬಿಜೆಪಿಗೆ 11 ರಿಂದ 14, ಕಾಂಗ್ರೆಸ್‌ಗೆ 19 ರಿಂದ 23 ಹಾಗೂ ಜೆಡಿಎಸ್‌ಗೆ 1ರಿಂದ 4 ಸ್ಥಾನಗಳು ಸಿಗಬಹುದು ಎಂದು ಸಮೀಕ್ಷೆ ಅಂದಾಜಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ 9ರಿಂದ 13, ಕಾಂಗ್ರೆಸ್‌ 24 ರಿಂದ 27 ಹಾಗೂ ಜೆಡಿಎಸ್‌ 2 ಸ್ಥಾನ ಗೆಲ್ಲಬಹುದು. ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ 27ರಿಂದ 30, ಕಾಂಗ್ರೆಸ್‌ 19 ರಿಂದ 22 ಹಾಗೂ ಜೆಡಿಎಸ್‌ಗೆ 1 ಸ್ಥಾನ ಗೆಲ್ಲಬಹುದು
ಮಧ್ಯ ಕರ್ನಾಟಕದಲ್ಲಿ ಬಿಜೆಪಿಗೆ 10 ರಿಂದ 13, ಕಾಂಗ್ರೆಸ್‌ಗೆ 7ರಿಂದ 10 ಹಾಗೂ ಜೆಡಿಎಸ್‌ಗೆ 1 ಸ್ಥಾನ ಸಿಗಲಿದೆ ಎಂದು ಅಂದಾಜಿಸಲಾಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top