ಹಾಸನದ ವ್ಯಕ್ತಿ ಸಾವಿಗೀಡಾದ ಬಳಿಕ ಎಚ್ಚರಿಕೆ ಗಂಟೆ
ಬೆಂಗಳೂರು : ರಾಜ್ಯದಲ್ಲಿ ತೀವ್ರ ಗತಿಯಲ್ಲಿ ಹರಡುತ್ತಿರುವ ಎಚ್3ಎನ್2 ವೈರಸ್ಗೆ ಹಾಸನ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಇದು ರಾಜ್ಯದಲ್ಲಿ ಎಚ್3ಎನ್2 ವೈರಸ್ನಿಂದ ಸಂಬವಿಸಿದ ಮೊದಲ ಸಾವು.
ಮೃತ ವ್ಯಕ್ತಿಯ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಆರೋಗ್ಯ ತಪಾಸಣೆ ಭರದಿಂದ ಸಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ತಪಾಸಣೆ ನಡೆಸಲು ಮುಂದಾಗಿದೆ. ಅನಾರೋಗ್ಯ ಪೀಡಿತ ಜನರು ಹಾಗೂ ವೃದ್ಧರನ್ನು ಕೂಡ ಪರೀಕ್ಷೆ ನಡೆಸಲಾಗಿದೆ ಎಂದು ಡಿಎಚ್ಓ ಡಾ.ಶಿವಸ್ವಾಮಿ ಮಾಹಿತಿ ನೀಡಿದ್ದಾರೆ.
ಎಚ್3ಎನ್2 ವೈರಸ್ ಸೋಂಕಿತರಲ್ಲಿ ಕೊರೊನ ಮಾದರಿಯಲ್ಲೇ ತೀವ್ರ ಜ್ವರ, ಮೈಕೈ ನೋವು ಇತ್ಯಾದಿ ಲಕ್ಷಣಗಳಿರುತ್ತವೆ. ಆದರೆ ಇದು ಕೊರೊನದಷ್ಟು ಅಪಾಯಕಾರಿ ಅಲ್ಲ ಎನ್ನಲಾಗುತ್ತಿದೆ.