ಇಂಡೋನೇಷ್ಯಾದ ರಾಜಧಾನಿಯ ಸ್ಥಳಾಂತರ

ಜಕಾರ್ತ : ಇಂಡೋನೇಷ್ಯಾದ ರಾಜಧಾನಿಯನ್ನೇ ಸ್ಥಳಾಂತರ ಮಾಡಲಾಗುತ್ತಿದೆ. ಹಾಲಿ ರಾಜಧಾನಿ ಜಕಾರ್ತದಲ್ಲಿ ಜನದಟ್ಟಣೆ, ಮಾಲಿನ್ಯ ಹೆಚ್ಚಳವಾಗಿದ್ದು, ಭೂಕಂಪಗಳಿಗೆ ತುತ್ತಾಗಿ, ಕ್ಷಿಪ್ರಗತಿಯಾಗಿ ಜಾವಾ ಸಮುದ್ರಕ್ಕೆ ಮುಳುಗುವ ಭೀತಿ ಇದ್ದ ಹಿನ್ನೆಲೆಯಲ್ಲಿ ಹೊಸ ರಾಜಧಾನಿ ನಿರ್ಮಾಣ ಆರಂಭಿಸಲಾಗಿದೆ.
ಈಗ ಸರ್ಕಾರ ಇಂಡೋನೇಷ್ಯಾದ ರಾಜಧಾನಿಯನ್ನು ಬೊರ್ನಿಯೊ ದ್ವೀಪಕ್ಕೆ ವರ್ಗಾವಣೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದೆ. ಹೊಸ ಮಹಾನಗರವು “ಸುಸ್ಥಿರ ಅರಣ್ಯ ನಗರ” ಎಂದು ಇಂಡೋನೇಷ್ಯಾದ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಈ ಯೋಜನೆ ಪರಿಸರವಾದಿಗಳ ಮತ್ತು ಸ್ಥಳೀಯ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಿದೆ. ಒರಾಂಗುಟನ್‌ಗಳಂತಹ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಆವಾಸಸ್ಥಾನವನ್ನು ಮತ್ತಷ್ಟು ಕುಗ್ಗಿಸುತ್ತದೆ ಮತ್ತು ತಮ್ಮ ಜೀವನೋಪಾಯಕ್ಕಾಗಿ ಭೂಮಿಯನ್ನು ಅವಲಂಬಿಸಿರುವ ಸ್ಥಳೀಯ ಜನರನ್ನು ಸ್ಥಳಾಂತರಿಸುತ್ತದೆ ಎಂಬ ಆರೋಪ ಕೇಳಿಬಂದಿದೆ.
ಹೊಸ ರಾಜಧಾನಿಯ ವೀಕ್ಷಣೆಗೆ ಪ್ರವೇಶ ಸೀಮಿತವಾಗಿದ್ದರೂ, ಮಾರ್ಚ್ ಆರಂಭದಲ್ಲಿ ನಿರ್ಮಾಣ ಪ್ರಗತಿಯನ್ನು ವೀಕ್ಷಿಸಲು ಪ್ರದೇಶದ ಕೆಲವು ಭಾಗಗಳಿಗೆ ಪ್ರವಾಸ ಮಾಡಲು ಅಸೋಸಿಯೇಟೆಡ್ ಪ್ರೆಸ್‌ಗೆ ಅನುಮತಿ ನೀಡಲಾಗಿತ್ತು.

ರಾಜಧಾನಿ ವರ್ಗಾವಣೆ ಏಕೆ?

ಜಕಾರ್ತ 10 ಮಿಲಿಯನ್ ಮಂದಿಗೆ ವಾಸವಾಗಿದ್ದಾರೆ. ಇದು ದೊಡ್ಡ ದೊಡ್ಡ ಮೆಟ್ರೋಪಾಲಿಟನ್ ನಗರ. ಆದರೆ ಇದನ್ನು ಜಗತ್ತಿನಲ್ಲಿ ಅತಿ ವೇಗವಾಗಿ ಮುಳುಗುತ್ತಿರುವ ನಗರ ಎಂದು ಗುರುತಿಸಲಾಗಿದೆ ಹಾಗೂ ಈಗಿನ ವೇಗದಲ್ಲಿ ಮುಳುಗುವ ಪ್ರಕ್ರಿಯೆ ಮುಂದುವರಿದರೆ 2050ರ ವೇಳೆಗೆ ನಗರದ ಮೂರನೇ ಒಂದು ಭಾಗ ಮುಳುಗಡೆಯಾಗಲಿದೆ. ಅನಿಯಂತ್ರಿತ ಅಂತರ್ಜಲ ಬಸಿದದ್ದು ಇದಕ್ಕೆ ಮುಖ್ಯ ಕಾರಣವಾಗಿದೆ. ಹವಾಮಾನ ಬದಲಾವಣೆಯಿಂದಾಗಿ ಏರುತ್ತಿರುವ ಜಾವಾ ಸಮುದ್ರದ ಮಟ್ಟದಿಂದ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ.
ಇಲ್ಲಿನ ಗಾಳಿ ಹಾಗೂ ಅಂತರ್ಜಲ ಅತಿಯಾಗಿ ಕಲುಷಿತಗೊಂಡಿದ್ದು, ಪ್ರವಾಹದ ಕಾರಣದಿಂದಾಗಿ ರಸ್ತೆಗಳು ಜಲಾವೃತಗೊಳ್ಳಲಿದ್ದು, ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ವರ್ಷಕ್ಕೆ 4.5 ಬಿಲಿಯನ್ ಡಾಲರ್‌ನಷ್ಟು ವೆಚ್ಚವಾಗುತ್ತಿದೆ.
ಜಕಾರ್ತಾವನ್ನು ಬಾಧಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು, ಅದರ ಜನಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ದೇಶವು ಸುಸ್ಥಿರ ನಗರದೊಂದಿಗೆ ಹೊಸದಾಗಿ ಪ್ರಾರಂಭಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಅಧ್ಯಕ್ಷ ಜೊಕೊ ವಿಡೋಡೊ ಹೊಸ ನಗರದ ನಿರ್ಮಾಣವನ್ನು ಕೈಗೆತ್ತಿಕೊಂಡಿದ್ದಾರೆ































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top