ಬೀಜಿಂಗ್ : ಹಲವು ಪ್ರತಿಕೂಲ ಪರಿಸ್ಥಿತಿಯಿರುವ ಹೊರತಾಗಿಯೂ ಕ್ಸಿ ಜಿನ್‌ಪಿಂಗ್ ಅವರೇ ಚೀನದ ಅಧ್ಯಕ್ಷರಾಗಿ ಸತತ ಮೂರನೇ ಬಾರಿ ಪುನರಾಯ್ಕೆಯಾಗಿದ್ದಾರೆ. ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ 14ನೇ ಸಭೆಯಲ್ಲಿ ಕ್ಸಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಏರಿದಾಗ ಕ್ಸಿ ಜಿನ್‌ಪಿಂಗ್ ಅವರು ವಿಶ್ವಾಸಘಾತುಕ, ಭ್ರಷ್ಟ ಅಥವಾ ನಿಷ್ಪರಿಣಾಮಕಾರಿ ಎಂದು ಪರಿಗಣಿಸಲ್ಪಟ್ಟ ಅಧಿಕಾರಿಗಳನ್ನು ತೆಗೆದುಹಾಕಲು ಬೃಹತ್ ಅಭಿಯಾನವನ್ನು ಕೈಗೊಂಡಿದ್ದರು. ಆ ಖಾಲಿ ಸ್ಥಾನಗಳಲ್ಲಿ ಮಿತ್ರರನ್ನು ತುಂಬುವ ಮೂಲಕ ಜಿನ್‌ಪಿಂಗ್ ತಮ್ಮ ನೆಲೆಯನ್ನು ಭದ್ರಪಡಿಸಿಕೊಂಡಿದ್ದರು.
ಚೀನದಲ್ಲಿ ಜಿನ್‌ಪಿಂಗ್ ಹಿಡಿತ ಇನ್ನಷ್ಟು ಬಲವಾಗಿದ್ದು, ಅವರನ್ನು ಆಧುನಿಕ ಚೀನನಾದನಿರ್ಮಾತೃ ಎನ್ನುತ್ತಾರೆ. 70ರ ಹರೆಯದವರಾಗಿದ್ದರೂ ಆ ಸ್ಥಾನಕ್ಕೆ ಬೇರೊಬ್ಬ ಉತ್ತಮ ನಾಯಕ ಸಿಗುವವರೆಗೂ ಅವರ ಅಧಿಕಾರಾವಧಿ ಮುಂದುವರಿಯಲಿದೆ.