ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಮಂಗಳೂರು ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯಂದು ಮಂಗಳೂರಿನ ಪುರಭವನದಲ್ಲಿ ಜಿಲ್ಲಾ ಮಟ್ಟದ ಸಮಾಜ ಸೇವೆಯನ್ನು ಗುರುತಿಸಿ ನಯನ ರೈ ಹಾಗೂ ವಿಶೇಷ ಚೇತನ ಮಗಳಾದ ಮೇದಿನಿಯನ್ನು ಸ್ವಾವಲಂಬಿಯಾಗಿ ಸಮಾಜದಲ್ಲಿ ಬದುಕಲು ಹುರಿದುಂಬಿಸಿ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಯತ್ನಿಸಿದ ಡಾ. ವೀಣಾ ಜಿ ಭಟ್ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಶೋಭಾ ಬಿ ಜಿ ಕಾರ್ಯಕ್ರಮ ಉದ್ಘಾಟಿಸಿದರು.
ಗೌರವ ಉಪಸ್ಥಿತಿಯಾಗಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ದ.ಕ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷ ಚಂಚಲ ತೇಜೋಮಯ, ಗೌರವಾಧ್ಯಕ್ಷೆ ಪ್ರೇಮಲತಾ ರಾವ್, ಉಪಾಧ್ಯಕ್ಷ ಉಷಾ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಮಹಿಳಾ ಒಕ್ಕೂಟಗಳ ಅಧ್ಯಕ್ಷೆ ಶಾಂತಿ ಹೆಗಡೆ, ಕಾರ್ಯದರ್ಶಿ ಪೂರ್ಣಿಮಾ ಶೆಟ್ಟಿ, ಸದಸ್ಯರಾದ ಸುರೇಖ ಹೆಬ್ಬಾರ್, ರೋಹಿಣಿ ರಾಘವ ಆಚಾರ್ಯ, ವತ್ಸಲ ರಾಜ್ಞಿ ಸಹಕರಿಸಿದರು.