ಪುತ್ತೂರು: ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಾಗಪ್ರತಿಷ್ಠೆ ಕಾರ್ಯಕ್ರಮ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಬುಧವಾರ ನಡೆಯಿತು.
ಬೆಳಿಗ್ಗೆ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಸಂಸ್ಕಾರ ಮಂಗಲ ಹೋಮ, ಆಶ್ಲೇಷಾ ಬಲಿ, ಅಷ್ಟವಟು ಆರಾಧನೆ, ಪಂಚವಿಂಶತಿ ಕಲಶ ಪೂಜೆ, ನಾಗಪ್ರತಿಷ್ಠೆ ಪಂಚಾಮೃತಾಭಿಷೇಕ, ತಂಬಿಲ ಸೇವೆ, ಮಹಾಪೂಜೆ, ಪ್ರಸಾದ ವಿತರಣೆಯಾಗಿ, ಬಳಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಡಾ.ಎಂ.ಕೆ.ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಸ್ಥಳ ದಾನಿಗಳಾದ ವಾರಿಜ ಆಚಾರ್ಯ, ಪ್ರವೀಣ್ ಆಚಾರ್ಯ, ಸೇವಾದಾರರಾದ ನಳಿನಿ ಲೋಕಪ್ಪ ಗೌಡ ಕೆರೆಮನೆ ಮತ್ತು ಮನೆಯವರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಕೆರೆಮನೆ, ಸದಸ್ಯರುಗಳಾದ ಜನಾರ್ದನ ಜೋಯಿಸ ಕುತ್ತಿಗದ್ದೆ, ನಾಗೇಶ್ ನಾಯ್ಕ್, ಸಂಧ್ಯಾ ಕೈಪಂಗಳ ದೋಳ, ವೇದಾವತಿ ಕೆದ್ಕಾರು, ಮಾಜಿ ಅಧ್ಯಕ್ಷ ಬಿ.ಟಿ.ಮಹೇಶ್ಚಂದ್ರ ಸಾಲಿಯಾನ್, ನರಿಮೊಗರು ಗ್ರಾಪಂ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಶೆಣೈ, ಮುಂಡೂರು ಗ್ರಾಪಂ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಕುರೆಮಜಲು, ಪ್ರಮುಖರಾದ ಕಳುವಾಜೆ ವೆಂಕಟ್ರಮಣ ಗೌಡ, ಮಹಾಲಿಂಗ ನಾಯ್ಕ, ವಸಂತ ಗೌಡ ಸೇರಾಜೆ, ಮಾಧವ ಸಾಲ್ಯಾನ್ ಕುರೆಮಜಲು, ಚಾಲಚಂದ್ರ ಸೊರಕೆ, ಸುರೇಶ್ ಕಣ್ಣಾರಾಯ, ಗಣೇಶ್ ಸಾಲ್ಯಾನ್, ಗಣೇಶ್ ಸಾಲ್ಯಾನ್ ಕೈಪಂಗಳ, ಬಾಲಪ್ಪ ಗೌಡ ಕೆದ್ಕಾರು, ವೇದನಾಥ ಸುವರ್ಣ, ವಾಸುದೇವ ಸಾಲ್ಯಾನ್, ಪ್ರಕಾಶ್, ತಾಪಂ ಮಾಜಿ ಸದಸ್ಯೆ ಯಶೋಧಾ ಕೆ.ಗೌಡ, ನರಿಮೊಗರು ಗ್ರಾಪಂ ಸದಸ್ಯ ಉಮೇಶ್ ಇಂದಿರಾನಗರ, ಸರ್ವೆ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಶ್ರೀರಾಮ ಕಲ್ಲೂರಾಯ, ನಾರಾಯಣ ಭಟ್, ಕೃಷ್ಣಪ್ರಸಾದ್ ಶರ್ಮ ಮತ್ತಿತರರು ಉಪಸ್ಥಿತರಿದ್ದರು.