ಚಿಂತನೆಯ ವಿನ್ಯಾಸ ಮತ್ತು ಹೊಸತನದ ಪ್ರಾರಂಭ ಕುರಿತ ವಿಚಾರಗೋಷ್ಠಿ

ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಗೂ ವಿಭಿನ್ನವಾಗಿ ಆಲೋಚಿಸುವ ಶಕ್ತಿ ಇದೆ. ಈ ಚಿಂತನೆಗಳಿಗೆ ಮೂರ್ತ ರೂಪ ಕೊಡುವ ಮೂಲಕ ಅದನ್ನೊಂದು ವಿನ್ಯಾಸವನ್ನಾಗಿಸಿದರೆ ಹೊಸ ಹೊಸ ಉತ್ಪನ್ನಗಳು ಉದ್ಭವಿಸುವುದಕ್ಕೆ ಸಾಧ್ಯವಿದೆ ಎಂದು ಬೆಂಗಳೂರಿನ ವಿದ್ಯಾಕೋಶ ಫ್ರೈವೆಟ್ ಲಿಮಿಟೆಡ್ ಇದರ ಸ್ಥಾಪಕ ಹಾಗೂ ಐಐಎಸ್ಸಿ ಬೆಂಗಳೂರಿನ ಪ್ರಾಜೆಕ್ಟ್ ನೆಟ್‌ವರ್ಕ್ ವಿಭಾಗದ ಪೂರ್ವ ಮುಖ್ಯಸ್ಥ ಡಾ.ಅಶೋಕ್ ರಾವ್ ಹೇಳಿದರು

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲ ವಿಜ್ಞಾನ ವಿಭಾಗದ ಆಶ್ರಯದಲ್ಲಿ ನಡೆದ ಚಿಂತನೆ ಚಿಂತನೆಯ ವಿನ್ಯಾಸ ಮತ್ತು ಹೊಸತನದ ಪ್ರಾರಂಭ ಎನ್ನುವ ವಿಷಯದ ಬಗ್ಗೆ ನಡೆದ ವಿಚಾರಗೋಷ್ಟಿಯಲ್ಲಿ ಅವರು ಮಾತಾಡಿದರು.

ವಿದ್ಯಾರ್ಥಿಯಾಗಿದ್ದಾಗಲೇ ತಮ್ಮ ಪಠ್ಯಕ್ರಮವನ್ನು ಅಭ್ಯಸಿಸುತ್ತಾ ಚಿಂತನೆಗಳನ್ನು ನಡೆಸಬಹುದು. ನಿಮ್ಮ ಕಲ್ಪನೆಗಳನ್ನು ಇತರೊಡನೆ ಹಂಚಿಕೊಳ್ಳುತ್ತಾ ಅದನ್ನೊಂದು ವಿನ್ಯಾಸವನ್ನಾಗಿಸಬೇಕು ಎಂದರು.



































 
 

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ, ಮೂಲ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ರಮಾನಂದ ಕಾಮತ್ ಉಪಸ್ಥಿತರಿದ್ದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳಾದ ಸುದೀಪ್ ಶಿವರಾವ್ ಸ್ವಾಗತಿಸಿ, ಅಶ್ವಿನಿ.ಕೆ ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top