ಆಚರಣೆಯಿಂದ ದೂರ ಉಳಿದ ಮುಸ್ಲಿಂ ಮುಖಂಡರು
ಚಿಕ್ಕಮಗಳೂರು : ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ಇಂದಿನಿಂದ ಉರುಸ್ ಆರಂಭ. ಮೂರು ದಿನಗಳ ಕಾಲ ನಡೆಯಲಿರುವ ಉರುಸ್ ಆಚರಣೆಗೆ ಇದೀಗ ರಾಜ್ಯ ಸರ್ಕಾರ ರಚನೆ ಮಾಡಿದ್ದ ದತ್ತಪೀಠ ವ್ಯವಸ್ಥಾಪನ ಮಂಡಳಿ ನೇತೃತ್ವದಲ್ಲಿ ತೀವ್ರ ವಿರೋಧ ಕೇಳಿಬಂದಿದೆ. ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುವ ಉರುಸ್ ಆಚರಣೆಯಿಂದ ಮುಸ್ಲಿಂ ಸಮುದಾಯ ದೂರ ಉಳಿಯಲು ನಿರ್ಧರಿಸಿದ್ದಾರೆ. ಇನ್ನು ಜಿಲ್ಲಾಡಳಿತ ಕರೆದಿದ್ದ ಸಭೆಗೆ ಮುಸ್ಲಿಂ ಸಮುದಾಯದ ಮುಖಂಡರು ಗೈರಾಗಿದ್ದು, ರಾಜ್ಯ ಸರ್ಕಾರಕ್ಕೆ ವಿವಿಧ ಬೇಡಿಕೆ ಇಟ್ಟಿದ್ದಾರೆ.
ರಾಜ್ಯ ಸರ್ಕಾರಕ್ಕೆ ಮುಸ್ಲಿಂ ಸಮುದಾಯ ಇಟ್ಟ ಬೇಡಿಕೆಗಳಿವು
ಅರ್ಚಕ ನೇಮಕಾತಿ ಹಾಗೂ ವ್ಯವಸ್ಥಾಪನ ಮಂಡಳಿಯನ್ನ ರದ್ದು ಮಾಡಬೇಕು, ಗೋರಿಗಳಿಗೆ ಹಸಿರು ಬಟ್ಟೆ ಹೊದಿಸಿ ಪೂಜೆ , ನಮಾಜ್ ಮಾಡಲು ಅವಕಾಶ ನೀಡಬೇಕು.
ಈ ಮೇಲಿನ ಬೇಡಿಕೆಗಳನ್ನ ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ವಿವಾದಿತ ಸ್ಥಳದಲ್ಲಿಯೇ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ.