ಇಡಿ ಸಮನ್ಸ್‌ಗೆ ಪ್ರತಿಕ್ರಿಯಿಸಿದ ಕೆಸಿಆರ್ ಪುತ್ರಿ ಕೆ. ಕವಿತಾ: ವಿಚಾರಣೆಗೆ ಸಂಪೂರ್ಣ ಸಹಕರಿಸುತ್ತೇನೆ ಆದರೆ ಸಮಯ ಕೇಳುತ್ತೇನೆ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಭ್ರಷ್ಟಾಚಾರ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಪ್ರಮುಖ ಆರೋಪಿ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರನ್ ಪಿಳ್ಳೈ ಬಂಧನದ ಬಳಿಕ ವಿಚಾರಣೆಗೆ ಹಾಜರಾಗುವಂತೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಬಿಆರ್ ಎಸ್ ನಾಯಕಿ ಕೆ. ಕವಿತಾ ಅವರಿಗೆ ಜಾರಿ ನಿರ್ದೇಶನಾಲಯ ಸೂಚಿಸಿದೆ.

ಹಗರಣಕ್ಕೆ ಸಂಬಂಧಪಟ್ಟಂತೆ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಏಜೆನ್ಸಿಯು ವಿಚಾರಣೆಗೆ ಒಳಪಡಿಸಿದ ಸಮಯದಲ್ಲಿ ಬಿಡುಗಡೆ ಮಾಡಲಾಗುತ್ತಿರುವ ಕಿಕ್‌ಬ್ಯಾಕ್‌ಗಳ ಆದಾಯದ ಲಾಂಡರಿಂಗ್ ಬಗ್ಗೆ ಇಡಿ ಸಮನ್ಸ್ ಜಾರಿಯಾಗಿರುವುದರಿಂದ ಇದು ಮಹತ್ವದ್ದಾಗಿದೆ.

ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿ ಅಂಗೀಕರಿಸಲು ಜಂತರ್ ಮಂತರ್‌ನಲ್ಲಿ ನಾಡಿದ್ದು 10ರಂದು ರಾಜಕೀಯ ರ್ಯಾಲಿಗೆ ಬದ್ಧರಾಗಿರುವ ಕಾರಣ ಕವಿತಾ ಅವರು ನಾಳೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಕಡಿಮೆಯಿದೆ.































 
 

ಮಾರ್ಚ್ 9 ರಂದು ಏಜೆನ್ಸಿಯ ಮುಂದೆ ಹಾಜರಾಗಲು ED ಯಿಂದ ಸಮನ್ಸ್ ಬಂದಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಕವಿತಾ, “ಕಾನೂನು ಪಾಲಿಸುವ ನಾಗರಿಕಳಾಗಿ, ನಾನು ತನಿಖಾ ಸಂಸ್ಥೆಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ. ಆದಾಗ್ಯೂ ಮಾರ್ಚ್ 19ರಂದು ದೆಹಲಿಯಲ್ಲಿ ಧರಣಿ ಇರುವುದರಿಂದ ಬೇರೆ ದಿನಾಂಕದಂದು ಹಾಜರಾಗಲು ಕಾನೂನು ಸಂಸ್ಥೆ ಮುಂದೆ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

ಹೇಳಿಕೆಯಲ್ಲಿ ಆಕ್ರಮಣಕಾರಿ ನಿಲುವು ವ್ಯಕ್ತಪಡಿಸಿರುವ ಕವಿತಾ ಅವರು, ನಮ್ಮ ನಾಯಕ ಸಿಎಂ ಶ್ರೀ ಕೆ.ಸಿ. ರಾವ್ ಅವರ ಹೋರಾಟ ವಿರುದ್ಧ ಮತ್ತು ಇಡೀ ಬಿಆರ್‌ಎಸ್ ಪಕ್ಷದ ವಿರುದ್ಧದ ಬೆದರಿಕೆಯ ಈ ರೀತಿಯ ತಂತ್ರಗಳು ನಮ್ಮನ್ನು ತಡೆಯುವುದಿಲ್ಲ ಎಂದು ಕೇಂದ್ರದಲ್ಲಿರುವ ಆಡಳಿತ ಪಕ್ಷವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top