1.5 ಕೋ. ರೂ. ಆಸ್ತಿಯನ್ನು ಸರಕಾರಕ್ಕೆ ಕೊಟ್ಟ ವೃದ್ಧ

ಮಕ್ಕಳು ನೋಡಿಕೊಂಡಿಲ್ಲ ಎಂಬ ಸಿಟ್ಟಿನಲ್ಲಿ ದಾನ

ಲಖನೌ : ಹಿರಿಯ ವ್ಯಕ್ತಿಯೊಬ್ಬರು ವೃದ್ಧಾಪ್ಯದಲ್ಲಿ ತನ್ನನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳ ಮೇಲಿನ ಸಿಟ್ಟಿನಲ್ಲಿ ಎಲ್ಲ 1.5 ಕೋ. ರೂ. ಆಸ್ತಿಯನ್ನು ಉತ್ತರ ಪ್ರದೇಶ ಸರಕಾರಕ್ಕೆ ಉಯಿಲು ಬರೆದುಕೊಟ್ಟಿದ್ದಾರೆ.

ನಾಥು ಸಿಂಗ್ ಎಂಬ 85ರ ಹರೆಯದ ವೃದ್ಧ ತಮ್ಮ ಐವರು ಮಕ್ಕಳಲ್ಲಿ ಯಾರೂ ಕೊನೆಯ ಕಾಲದಲ್ಲಿ ನೋಡಿಕೊಳ್ಳಲು ಮುಂದೆ ಬಾರದಿದ್ದಾಗ 1.5 ಕೋಟಿ ಮೌಲ್ಯದ ಆಸ್ತಿಯನ್ನು ಉತ್ತರಪ್ರದೇಶದ ಸರ್ಕಾರಕ್ಕೆ ಬರೆದುಕೊಟ್ಟಿದ್ದಾರೆ. ಅಲ್ಲದೆ ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದಾರೆ. ಮಗ ಮತ್ತು ನಾಲ್ವರು ಪುತ್ರಿಯರನ್ನು ಅಂತಿಮ ವಿಧಿಗಳಲ್ಲಿ ಪಾಲ್ಗೊಳ್ಳಲು ಬಿಡಬಾರದು ಎಂದು ಬರೆದಿಟ್ಟಿದ್ದಾರೆ.

ಮುಜಾಫರ್‌ನಗರದ ನಿವಾಸಿಯಾಗಿರುವ ನಾಥು ಸಿಂಗ್ 1.5 ಕೋಟಿ ರೂಪಾಯಿ ಮೌಲ್ಯದ ತಮ್ಮ ಮನೆ ಮತ್ತು ಜಮೀನು ಹೊಂದಿದ್ದಾರೆ. ಅವರಿಗೆ ಒಬ್ಬ ಮಗನಿದ್ದಾನೆ. ಅವರು ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ಸಹರಾನ್‌ಪುರದಲ್ಲಿ ವಾಸಿಸುತ್ತಿದ್ದಾರೆ. ನಾಲ್ವರು ಹೆಣ್ಣುಮಕ್ಕಳಿದ್ದು ಎಲ್ಲರೂ ವಿವಾಹವಾಗಿದ್ದಾರೆ.
ಪತ್ನಿಯ ಸಾವಿನ ನಂತರ ವೃದ್ಧ ಒಂಟಿ ಜೀವನ ನಡೆಸುತ್ತಿದ್ದಾರೆ. ಏಳು ತಿಂಗಳ ಹಿಂದೆ ಅವರು ತಮ್ಮ ಗ್ರಾಮದ ವೃದ್ಧಾಶ್ರಮಕ್ಕೆ ತೆರಳಿದ್ದಾರೆ. 85 ವರ್ಷ ವಯಸ್ಸಿನ ಅವರು ತಮ್ಮ ದೊಡ್ಡ ಕುಟುಂಬದ ಯಾರೊಬ್ಬರು ತಮ್ಮನ್ನು ಭೇಟಿಯಾಗಲು ಬರದ ಕಾರಣ ಬಹಳ ನೊಂದುಕೊಂಡಿದ್ದರು. ಇದರಿಂದ ಬೇಸತ್ತು ತಮ್ಮ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಕೊಡಲು ಉಯಿಲು ಮಾಡಿ ಮರಣದ ನಂತರ ಮನೆಯಿರುವ ಜಾಗದಲ್ಲಿ ಆಸ್ಪತ್ರೆ ಅಥವಾ ಶಾಲೆ ನಿರ್ಮಿಸುವಂತೆ ಕೇಳಿಕೊಂಡಿದ್ದಾರೆ.
ಈ ವಯಸ್ಸಿನಲ್ಲಿ ನಾನು ನನ್ನ ಮಗ ಮತ್ತು ಸೊಸೆಯೊಂದಿಗೆ ವಾಸಿಸಬೇಕಾಗಿತ್ತು. ಆದರೆ ಅವರು ನನ್ನನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿಲ್ಲ. ಆದ್ದರಿಂದ ನಾನು ಆಸ್ತಿಯನ್ನು ಸರ್ಕಾರಕ್ಕೆ ಬರೆಯಲು ಮನಸ್ಸು ಮಾಡಿದೆ. ಸಂಶೋಧನೆ ಮತ್ತು ಶೈಕ್ಷಣಿಕ ಕಾರ್ಯಗಳಲ್ಲಿ ಬಳಸಲು ತನ್ನ ದೇಹವನ್ನು ದಾನ ಮಾಡಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ಸ್ಥಳೀಯ ಸಬ್-ರಿಜಿಸ್ಟ್ರಾರ್ ಅವರು ನಾಥು ಸಿಂಗ್ ಅವರ ಅಫಿಡವಿಟ್ ಅನ್ನು ಸ್ವೀಕರಿಸಿದ್ದಾರೆ ಮತ್ತು ಅವರ ಮರಣದ ನಂತರ ಇದು ಜಾರಿಗೆ ಬರಲಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top