ಪುತ್ತೂರು: ಅನಂತಾಡಿ ಶ್ರೀ ಉಳ್ಳಾಲ್ತಿ ಮೆಚ್ಚಿ ಜಾತ್ರೆ ಮಾರ್ಚ್ 7ರಂದು ಬಂಟ್ರಿಂಜ ಮಾಡದಲ್ಲಿ ನಡೆಯಿತು.
ಸೋಮವಾರ ರಾತ್ರಿ ದೊಡ್ಡಮನೆಯಿಂದ ಭಂಡಾರ ಚಿತ್ತಿರಿಗೆ ಬೂಡುಗೆ ತೆರಳಿತು. ಅಲ್ಲಿ ಚಂದನದ ಮೊಗವನ್ನು ಜೊತೆ ಸೇರಿಸಿಕೊಂಡು, ಕಿರುವಾಳು ಭಂಡಾರ ಬಂಟ್ರಿಂಜ ಮಾಡಕ್ಕೆ ಆಗಮಿಸಿತು.
ಮಂಗಳವಾರ ಬೆಳಿಗ್ಗೆ ಮೆಚ್ಚಿ ಜಾತ್ರೆ ಆರಂಭಗೊಂಡು, ಮೊದಲಿಗೆ ಚಂದನದ ಮೊಗ ಏರಿಸಲಾಯಿತು. ಬಳಿಕ ಚಿನ್ನದ ಮೊಗ ನಂತರ ಬೆಳ್ಳಿಯ ಮೊಗ ಏರಿಸಿ ನೇಮ ನಡೆಯಿತು. ಲಕ್ಷಾಂತರ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.