ಪುತ್ತೂರು: ನಿಸರ್ಗಪ್ರಿಯ ಅವರ ವರ್ಗಾವಣೆ ಬಳಿಕ ತೆರವಾಗಿದ್ದ ಪುತ್ತೂರು ತಹಸೀಲ್ದಾರ್ ಹುದ್ದೆಗೆ ಭೀಮರಾಯನಗುಡಿ ಎಸ್.ಎಲ್.ಎ.ಒ. ಕಚೇರಿಯ ಕಂದಾಯ ಅಧಿಕಾರಿ ಜೆ. ಶಿವಶಂಕರ್ ಅವರು ಆಗಮಿಸಿದ್ದು, ಅಧಿಕಾರ ಸ್ವೀಕರಿಸಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ಖಾಲಿ ಇರುವ ಹುದ್ದೆಗಳಿಗೆ ವರ್ಗಾವಣೆ ನಡೆಸಲಾಗಿದೆ. ಭೀಮರಾಯನಗುಡಿ ಎಸ್.ಎಲ್.ಎ.ಓ. ಕಚೇರಿಯ ತಹಸೀಲ್ದಾರ್ ಗ್ರೇಡ್-2 ಆಗಿದ್ದ ಜೆ. ಶಿವಶಂಕರ್ ಅವರನ್ನು ಪುತ್ತೂರು ಗ್ರೇಡ್-1 ತಹಸೀಲ್ದಾರ್ ಆಗಿ ನಿಯುಕ್ತಿಗೊಳಿಸಿ, ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಸೋಮವಾರ ತಹಸೀಲ್ದಾರ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ, ಶಾಸಕ ಸಂಜೀವ ಮಠಂದೂರು ಅವರನ್ನು ಭೇಟಿಯಾದರು.