ಪುತ್ತೂರು: ಇತಿಹಾಸ ಪ್ರಸಿದ್ಧ ಅನಂತಾಡಿ ಶ್ರೀ ಉಳ್ಳಾಲ್ತಿ ಮೆಚ್ಚಿ ಜಾತ್ರೆಯ ಹಿಂದಿನ ದಿನವಾದ ಸೋಮವಾರ ರಾತ್ರಿ ದೈವಗಳ ಭಂಡಾರ ಆಗಮನವಾಯಿತು.

ದೊಡ್ಡಮನೆಯಿಂದ ಸಂಪ್ರದಾಯದಂತೆ ಭಂಡಾರ ಹೊರಟು, ಚಿತ್ತರಿಗೆ ಬೂಡಿಗೆ ದೈವಗಳ ಭಂಡಾರ ಆಗಮನವಾಯಿತು. ಚಿತ್ತರಿಗೆ ಬೂಡಿನಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ ಪೂಜೆ ನೆರವೇರಿತು.
ನಂತರ ದೈವಗಳ ಭಂಡಾರ ಬಂಟ್ರಿಂಜ ಮಾಡಕ್ಕೆ ತೆರಳಿತು. ಮಂಗಳವಾರ ಮಧ್ಯಾಹ್ನ ಶ್ರೀ ಉಳ್ಳಾಲ್ತಿ ದೈವದ ಮೆಚ್ಚಿ ಜಾತ್ರೆ ನಡೆಯಲಿದೆ.