ವಿಹಿಂಪ, ಬಜರಂಗಳದ ದಕ್ಷಿಣ ಪ್ರಾಂತ ಬೈಠಕ್ ಹಾಗೂ ಶೌರ್ಯ ಯಾತ್ರೆ ಯಶಸ್ಸಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ

ಪುತ್ತೂರು : ತೆಂಕಿಲ ವಿವೇಕಾನಂದ ಶಾಲೆಯಲ್ಲಿ ನಡೆಯುವ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಬೈಠಕ್ ಹಾಗೂ ಮಾ.5 ರಂದು ನಡೆಯುವ ಶೌರ್ಯ ಯಾತ್ರೆಯ ಯಶಸ್ಸಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಲಾಯಿತು.

ಮಾ.4 ಹಾಗೂ 5 ರಂದು ಪ್ರಾಂತ ಬೈಠಕ್ ನಡೆಯಲಿದ್ದು, ಮಾ.5 ರಂದು ಸಂಜೆ ಶೌರ್ಯ ಯಾತ್ರೆ ನಡೆಯಲಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಶ್ರೀ ಮಗಾಲಿಂಗೇಶ್ವರ ದೇವಸ್ಥಾನದ ನಡೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವೆ.ಮೂ.ವಿ.ಎಸ್್.ಭಟ್ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ಮುರಳೀಕೃಷ್ಣ ಹಸಂತಡಕ, ವಿಹಿಂಪ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಗ್ರಾಮಾಂತರ ಕಾರ್ಯದರ್ಶಿ ರವಿಕುಮಾರ್ ಕೈತ್ತಡ್ಕ, ನಗರ ಉಪಾಧ್ಯಕ್ಷ ಮಧುಸೂದನ್ ಪಡ್ಡಾಯೂರು, ಬಜರಂಗದಳ ಸಂಚಾಲಕ ಹರೀಶ್ ದೋಳ್ಪಾಡಿ, ಸಹ ಸಂಚಾಲಕ ಚೇತನ್ ಬೊಳುವಾರು, ಜಿಲ್ಲಾ ನ್ಯಾಯ ಸಂಚಾಲಕ ಮಾಧವ ಪೂಜಾರಿ ಉಪಸ್ಥಿತರಿದ್ದರು.





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top