ಮಂಗಳೂರು : ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆ : ಓರ್ವ ಬಾಲಕಿ ಪಾರು!

ಮಂಗಳೂರು: ಕೊಡಿಯಾಲ್ ಬೈಲಿನಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಸಂಭವಿಸಿದೆ.

ಮೃತರನ್ನು ವಿಜಯಾ(33) ಮತ್ತು ಶೋಭಿತಾ (4) ಮೃತ ದುರ್ದೈವಿಯಾಗಿದ್ದು, ಅದೃಷ್ಟವಶಾತ್ 12 ವರ್ಷದ ಯಜ್ಞಾ ನೇಣು ಕುಣಿಕೆಯಿಂದ ಪಾರಾಗಿದ್ದಾಳೆ.

ವಿಜಯಾ ಅವರ ಪತಿ ಆರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ಆಕೆ ಉಮೇಶ್ ಎಂಬುವರನ್ನು ಮರು ಮದುವೆಯಾಗಿದ್ದರು. ಆದರೆ ಉಮೇಶ್ ಇತ್ತೀಚೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಆಸರೆಯಾಗಿದ್ದ ಎರಡನೇ ಪತಿಯೂ ಆತ್ಮಹತ್ಯೆಗೆ ಶರಣಾಗಿದ್ದರಿಂದ ನೊಂದ ವಿಜಯಾ ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಯಜ್ಞಾ ಕಾಲಿಗೆ ಟೀಪಾಯಿ ಸಿಕ್ಕಿದ್ದರಿಂದ ಅದರ ಮೇಲೆ ನಿಂತು ಜೀವ ಉಳಿಸಿಕೊಳ್ಳಲು ಜೋರಾಗಿ ಕೂಗಿದಳು. ಕೂಡಲೇ ಅಲ್ಲಿಗೆ ಬಂದ ಸ್ಥಳೀಯರು ಮೂವರನ್ನು ಕೆಳಗಿಳಿಸಿದರು. ಆದರೆ ಅಷ್ಟರಲ್ಲಾಗಲೇ ವಿಜಯಾ ಮತ್ತು ಶೋಭಿತಾ ಮೃತಪಟ್ಟಿದ್ದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top