ಪುತ್ತೂರು “ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಒಳಮೊಗ್ರು ಗ್ರಾಪಂ, ಅಜಲಡ್ಕಕೆರೆ ಸಮಿತಿ, ಸಹಯೋಗದಲ್ಲಿ 541ನೇ ನಮ್ಮೂರ ನಮ್ಮ ಕೆರೆ ಹೂಳೆತ್ತುವ, ಭೂಮಿ ಪೂಜೆ ಮತ್ತು ಉದ್ಘಾಟನೆ ಕಾರ್ಯಕ್ರಮ ಅಜಲಡ್ಕಕೆರೆ ಆವರಣದಲ್ಲಿ ಗುರುವಾರ ನಡೆಯಿತು.
ಪುತ್ತೂರು ಶಾಸಕ ಸಂಜೀವ ಮಠಂದೂರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಬಳಿಕ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಕೆರೆ ಸಮಿತಿ ಗೌರವಾಧ್ಯಕ್ಷ ರಾಧಾಕೃಷ್ಣ ಬೂಡಿಯರು ವಹಿಸಿದ್ದರು. ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಯೋಜನೆ ತಾಲೂಕು ಯೋಜನಾಧಿಕಾರಿ ಆನಂದ, ಕೆ, ತಾಪಂ ಸಹಾಯಕ ನಿರ್ದೇಶಕಿ ಶೈಲಜಾ ಭಟ್, ಕೆರೆ ಸಮಿತಿ ಅಧ್ಯಕ್ಷ ರಾಜೇಶ್ ರೈ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರೀವೇಣಿ, ಯೋಜನೆಯ ವಲಯಾಧ್ಯಕ್ಷ ಮಾಧವ ರೈ, ಜನಜಾಗೃತಿ ಕುಂಬ್ರ ವಲಯ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ,, ಹಿರಿಯರಾದ ಬಾಳಪ್ಪ ರೈ, ಒಳಮೊಗ್ರು ಗ್ರಾಪಂ ಉಪಾಧ್ಯಕ್ಷೆ ಸುಂದರಿ ಉಪಸ್ಥಿತರಿದ್ದರು.
ರಾಜೀವಿ ಪ್ರಾರ್ಥಿಸಿದರು. ಕುಂಬ್ರ ವಲಯ ಮೇಲ್ವಿಚಾರಕಿ ಸುನೀತಾ ಮೇಡಂ ಸ್ವಾಗತಿಸಿದರು. ಸೇವಾಪ್ರತಿನಿಧಿ ಅಕ್ಷತಾ ವಂದಿಸಿದರು. ಕೃಷಿ ಮೇಲ್ವಿಚಾರಕ ಉಮೇಶ್ ಬಿ ಕಾರ್ಯಕ್ರಮ ನಿರೂಪಿಸಿದರು. ಒಳಮೊಗ್ರು ಗ್ರಾಪಂ ಸದಸ್ಯರು, ಕೆರೆ ಸಮಿತಿ ಪದಾಧಿಕಾರಿಗಳು. ಸದಸ್ಯರು, ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಸೇವಾಪ್ರತಿನಿಧಿಗಳು ಹಾಗೂ ಊರ ಪರ ಊರ ಗಣ್ಯರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.