ಆಧ್ಯಾತ್ಮ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ನೀಡುತ್ತದೆ : ಶ್ರೀ ಗುರುದೇವಾನಂದ ಸ್ವಾಮೀಜಿ | ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ

ಪುತ್ತೂರು : ದೇಹವೆಂಬ ಪಥಕ್ಕೆ ರಥ ಧರ್ಮ. ಸತ್ಯವನ್ನು ಹೇಳುವ ಧರ್ಮ ಚಾಲನಾಶೀಲ. ಮನುಷ್ಯ ಬದುಕಿನ ಸಂವಿಧಾನ ಧರ್ಮ. ಇಲ್ಲಿ ಆತ್ಮ ಸತ್ಯ ಒಂದೇ ಸತ್ಯ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಐತಿಹಾಸಿಕ ಪಡುಮಲೆ ಕ್ಷೇತ್ರದ ಶ್ರೀ ಕೂವೆ ಶಾಸ್ತರ ದೇವಾಲಯದ ಪ್ರತಿಷ್ಟ ಬ್ರಹ್ಮಕಲಶೋತ್ಸವದ ೫ ನೆ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಾಚನ ನೀಡಿದರು.

ಅಧ್ಯಾತ್ಮ ಎಂಬುದು ಕೀಲಿ ಕೈ. ಅದರ ಮೂಲಕ ಎಲ್ಲಾ ಸಮಸ್ಯೆಗಳಿಂದ ಬಿಡುಗಡೆ ಪಡೆಯಬಹುದು. ಪಡುಮಲೆಯಲ್ಲಿ ಸುಂದರ ಶ್ರದ್ದಾ ಕೇಂದ್ರ ಅಭಿವೃದ್ಧಿಗೊಳ್ಳುವ ಮೂಲಕ ಯೋಗ ಮತ್ತು ಯೋಗ್ಯತೆ ಎರಡೂ ಈ ಊರಿನವರಿಗೆ ಒದಗಿದೆ ಎಂದು ಹೇಳಿದರು.































 
 

ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಕಲಿಯುಗದಲ್ಲಿ ಜನಸಾಮಾನ್ಯರ ಸಮರ್ಪಣಾ ಸೇವೆಯಿಂದ ಎಲ್ಲೆಡೆ ಬ್ರಹ್ಮಕಲಶೋತ್ಸವ ಆಗುತ್ತಿದೆ. ಪಡುಮಲೆಯಲ್ಲಿ ೧೧ ತಿಂಗಳಲ್ಲಿ ಸುಂದರ ದೇವಾಲಯ ಆಗಿದೆಯೆಂದರೆ ದೈವಿಕ ಶಕ್ತಿ, ಭಕ್ತರ ಪ್ರಯತ್ನದಿಂದ ಆಗಿದೆ. ದೇವಾಲಯದ ಒಳಗಿನ ಪವಿತ್ರತೆ ಉಳಿಸುವ ಕೆಲಸ ಆಗಬೇಕು ಎಂದು ನುಡಿದರು.

ಬ್ರಹ್ಮಕಲಶೋತ್ಸವ ಸಮಿತಿ ಗೌರವಧ್ಯಕ್ಷ ಬಲರಾಜ್ ಶೆಟ್ಟಿ ನಿಟ್ಟೆ ಗುತ್ತು ಫೇರಾಲು ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ನೆಹರೂ ಸ್ಮಾರಕ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ ಧಾರ್ಮಿಕ ಉಪನ್ಯಾಸ ನೀಡಿದರು. ಬಡಗನ್ನೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಕೆ., ಸುಳ್ಯಪದವು ಬಾಲಸುಬ್ರಹ್ಮಣ್ಣ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಸುಬ್ಬಣ್ಣ ರೈ ಮೇಗಿನಮನೆ, ಬಡಗನ್ನೂರು ಗ್ರಾ.ಪಂ. ಉಪಾಧ್ಯಕ್ಷ ಸಂತೋಷ್ ಆಳ್ವ ಗಿರಿಮನೆ, ಪದಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಉದಯ ಕುಮಾರ್ ಪದಡ್ಕ, ಬಡಗನ್ನೂರು ಗ್ರಾ.ಪಂ ಸದಸ್ಯರಾದ ವಸಂತ ಗೌಡ ಕನ್ನಯ, ಹೇಮಾವತಿ ಮೂಂಡೋಳೆ,  ಜೀರ್ಣೋದ್ಧಾರ ಮತ್ತು  ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಸಿ.ಯಚ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು  ಉಪಸ್ಥಿತರಿದ್ದರು.

ಸುಧಾ ಎಸ್. ರೈ ಪ್ರಾರ್ಥಿಸಿದರು. ಸ್ವಾಗತ ಸಮಿತಿ ಸಂಚಾಲಕ ಶಿವಪ್ರಸಾದ್ ಭಟ್ ಸ್ವಾಗತಿಸಿ, ನಾಗರಾಜ ಭಟ್ ಅರ್ತಿಕೂಡ್ಲು ವಂದಿಸಿದರು. ಬ್ರಹ್ಮಕಲಾಶೋತ್ಸವ ಸಮಿತಿ ಕಾರ್ಯದರ್ಶಿ ರಾಮಕೃಷ್ಣ ಭಟ್ ಸಿ. ಎಚ್., ಶಿಕ್ಷಕಿ ಭವ್ಯ  ಕಾರ್ಯಕ್ರಮ ನಿರ್ವಹಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top