ನವದೆಹಲಿ : ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾದತ್ತ ದೃಢವಾದ ಹೆಜ್ಜೆ ಇರಿಸಲು ಚೀನಾ, ಪಾಕಿಸ್ತಾನ ಗಡಿಗಳಿಗೆ ನಿಯೋಜಿಸಲು ರಕ್ಷಣಾ ಸಚಿವಾಲಯ ಭಾರತೀಯ ಸೇನೆಯಿಂದ 307 ಅತ್ಯಾಧುನಿಕ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್ಸ್‌ಗಳ ಖರೀದಿಗೆ ಪ್ರಸ್ತಾವನೆ ಬಂದಿದೆ.
ಈ ಪ್ರಸ್ತಾವನೆ 1 ಬಿಲಿಯನ್ ಡಾಲರ್ ಮೌಲ್ಯದ್ದಾಗಿದ್ದು, ಸಂಪುಟ ಸಮಿತಿ ಅನುಮೋದನೆಗೆ ಕಳಿಸಲಾಗಿದೆ. ಇದು ದೇಶಿಯವಾಗಿ ತಯಾರಾಗಲಿರುವ ಹೊವಿಟ್ಜರ್‌ಗಳ ಮೊದಲ ಖರೀದಿಯಾಗಿರಲಿದ್ದು, 50 ಕೀ.ಮೀ ವ್ಯಾಪ್ತಿವರೆಗಿನ ಟಾರ್ಗೆಟ್‌ಗಳನ್ನು ತಲುಪುವ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಗನ್‌ಗಳ ಪರೀಕ್ಷಾರ್ಥ ಪ್ರಯೋಗವನ್ನು ಸೇನಾಪಡೆಗಳು ಈಗಾಗಲೇ ಮುಕ್ತಾಯಗೊಳಿಸಿವೆ. ಬಳಕೆದಾರರ ಸಲಹೆ-ಸೂಚನೆಗಳನ್ನಾಧರಿಸಿ ಈ ಗನ್‌ಗಳನ್ನು ಮೇಲ್ದರ್ಜೆಗೇರಿಸಲಾಗಿದೆ.
ಹೊವಿಟ್ಜರ್‌ನ ತಂತ್ರಜ್ಞಾನವನ್ನು ಎರಡು ಖಾಸಗಿ ಸಂಸ್ಥೆಗಳಾದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಮತ್ತು ಭಾರತ್ ಫೋರ್ಜ್ ಗ್ರೂಪ್‌ನೊಂದಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಂಚಿಕೊಂಡಿದೆ ಮತ್ತು ಈ ಸಂಸ್ಥೆಗಳು 320 ಕ್ಕೂ ಹೆಚ್ಚು ಹೈ ಮೊಬಿಲಿಟಿ ವಾಹನಗಳು ಸೇರಿದಂತೆ ಪಡೆಗಳಿಗೆ ವ್ಯವಸ್ಥೆಯನ್ನು ಪೂರೈಸುತ್ತವೆ.