ಪುತ್ತೂರು: ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಇವಿಎಂ, ವಿವಿಪ್ಯಾಟ್ ಭೌತಿಕ ಪ್ರದರ್ಶನ ಹಾಗೂ ಜಾಗೃತಿ ಅಭಿಯಾನ ಮಾರ್ಚ್ 2ರಂದು ತಾಲೂಕು ಆಡಳಿತ ಸೌಧದ ವಠಾರದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಸಂಚಾರಿ ಪ್ರದರ್ಶನ ವಾಹನದ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.
ಇವಿಎಂ, ವಿವಿಪ್ಯಾಟ್ ಭೌತಿಕ ಪ್ರದರ್ಶನ ಹಾಗೂ ಜಾಗೃತಿ ಅಭಿಯಾನ ಫೆ. 22ರಿಂದ ಆರಂಭಗೊಂಡಿದ್ದು, ಮಾರ್ಚ್ 12ರವರೆಗೆ ನಡೆಯಲಿದೆ. ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ, ಚುನಾವಣೆಯ ಅಣುಕು ಕಾರ್ಯಾಚರಣೆ ಇಲ್ಲಿ ನಡೆಯುತ್ತಿದೆ.
ಮಾಸ್ಟರ್ ಟ್ರೈನರ್ ಪ್ರಶಾಂತ್ ಅವರು ಇವಿಎಂನಲ್ಲಿ ಮತದಾನ ಮಾಡುವ ವಿಧಾನ ಹಾಗೂ ವಿವಿಪ್ಯಾಟ್‍ನಲ್ಲಿ ಖಚಿತ ಪಡಿಸಿಕೊಳ್ಳುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಸಹಾಯಕ ಆಯುಕ್ತ ಗಿರೀಶ್ ನಂದನ್, ತಾಪಂ ಇಒ ನವೀನ್ ಭಂಡಾರಿ, ಉಪತಹಸೀಲ್ದಾರ್ ಸುಲೋಚನಾ ಪಿ.ಕೆ. ಮೊದಲಾದವರು ಉಪಸ್ಥಿತರಿದ್ದರು.