ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯ, ಪುತ್ತೂರು ರಾಷ್ಟ್ರೀಯ ಸೇವಾ ಯೋಜನೆ ಘಟಕದ ನೇತೃತ್ವದಲ್ಲಿ ಎನ್ ಎಸ್ ಎಸ್ ಕೋಶ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಇದರ ಸಹಕಾರದೊಂದಿಗೆ ಮತ್ತು ನರಿಮೊಗರು ಗ್ರಾಮ ಪಂಚಾಯತ್, ತಾಲೂಕು ಕಾನೂನು ಸೇವಾ ಪ್ರಾಧಿಕಾರ ಪುತ್ತೂರು ಘಟಕ ಇದರ ಸಹಯೋಗದಲ್ಲಿ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮ ಹಾಗೂ ಕಾನೂನು ಮಾಹಿತಿ ಸಮೀಕ್ಷೆ ಫೆ. 27ರಂದು ನಡೆಯಿತು.
ಗ್ರಾಪಂ ಪಿಡಿಓ ರವೀಂದ್ರ ಯು ಮಾತನಾಡಿ, ಕಾನೂನು ಸಮೀಕ್ಷೆಯಿಂದ ಹಳ್ಳಿ ಜನರ ಎಲ್ಲ ಸಮಸ್ಯೆ ಗಳ ಬಗ್ಗೆ ಅರಿವು ಆಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧಾಕರ್ ಕುಲಾಲ್ ಮಾತನಾಡಿ, ಶಾಂತಿಗೋಡನ್ನು ದತ್ತು ಗ್ರಾಮವಾಗಿ ಪಡೆದುಕೊಂಡಿರುವ ವಿವೇಕಾನಂದ ಕಾನೂನು ವಿದ್ಯಾಲಯ ಉತ್ತಮ ಕೆಲಸ ಮಾಡುತ್ತಿದೆ. ವೀರಮಂಗಲ ಶಾಲೆಯಲ್ಲಿ ನಡೆದ ಎನ್ ಎಸ್ ಎಸ್ ಶಿಬಿರ ತುಂಬಾ ಅಚ್ಚುಕಟ್ಟಾಗಿ ಆಗಿದೆ ಎಂದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ. ಪಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನರ ಸಮಸ್ಯೆ ತಿಳಿದುಕೊಳ್ಳುವ ಕೆಲಸ ನಮ್ಮ ಮಕ್ಕಳಿಂದ ಆಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಂತಿಗೋಡು ಹಿ ಪ್ರಾ ಶಾಲೆ ಪ್ರಭಾರ ಮುಖ್ಯಗುರು ಸವಿತಾ ಕುಮಾರಿ ಎಮ್ ಡಿ., ಎಸ್ ಡಿ ಎಮ್ ಸಿ ಉಪಾಧ್ಯಕ್ಷ ದಾಮೋದರ ಸುವರ್ಣ ಕರ್ಪುತಮೂಳೆ, ವಕೀಲ ಸುಧೀರ್ ಕುಮಾರ್ ತೋಲ್ಪಡಿ, ಗ್ರಾಮ ವಿಕಾಸ ಸಮಿತಿ ಸದಸ್ಯ ವಿನೋದ್ ಕರ್ಪುತಮೂಳೆ, ಮಾಜಿ ಎಸ್ ಡಿ ಎಮ್ ಸಿ ಅಧ್ಯಕ್ಷೆ ಪ್ರಮೀಳಾ ಜನಾರ್ದನ ಆಚಾರ್ಯ, ರಾಜ್ಯಶಾಸ್ತ್ರ ವಿಭಾಗ ಸಂಯೋಜಕರು ಲಕ್ಷ್ಮಿಕಾಂತ್ ಎ., ಸಹ ಸಂಯೋಜಕಿ ಶ್ರೀ ರಕ್ಷಾ ಹಾಗೂ ಕಾನೂನು ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.