ಉಪ್ಪಿನಂಗಡಿ : ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಬಳಿಯ ಕುಮಾರಧಾರ ನದಿಗೆ ಸಣ್ಣ ನೀರಾವರಿ ಇಲಾಖೆಯಡಿ 2 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ರಚನೆ ಹಾಗೂ ಸಿ.ಎ.ಬ್ಯಾಂಕ್ ಬಳಿ ನೇತ್ರಾವತಿ ನದಿಗೆ 1 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ರಚನೆ ಕಾಮಗಾರಿಗೆ ಶಂಕು ಸ್ಥಾಪನೆ ಸೋಮವಾರ ನಡೆಯಿತು.
ಪುತ್ತೂರು ಶಾಸಕ ಸಂಜೀವ ಮಠಂದೂರು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಮಳೆಗಾಲದಲ್ಲಿ ತುಂಬಿ ಹರಿಯುವ ನದಿಯಿಂದಾಗಿ ಸಾರ್ವಜನಿಕ ಸೊತ್ತುಗಳಿಗೆ ಯಾವುದೇ ಹಾನಿಯಾಗಬಾರದು ಎಂಬ ನಿಟ್ಟಿನಲ್ಲಿ ತಡೆಗೋಡೆ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆಯಡಿ ಅನುದಾನ ಮಂಜೂರುಗೊಳಿಸಲಾಗಿದೆ. ಶೀಘ್ರ ಕಾಮಗಾರಿ ಸಂಪೂರ್ಣಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಸಿ.ಎ. ಬ್ಯಾಂಕ್ ಅಧ್ಯಕ್ಷ ಕೆ.ವಿ. ಪ್ರಸಾದ, ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇರಿ ವೇಗಸ್, ಪ್ರಮುಖರಾದ ಜಯಂತ್ ಪುರೋಳಿ, ಸುಂದರ ಗೌಡ, ಚಂದಪ್ಪ ಮೂಲ್ಯ, ರಾಮಚಂದ್ರ ಮಣಿಯಾಣಿ, ಡಾ. ಕೈಲಾರು ರಾಜಗೋಪಾಲ ಭಟ್, ವಿಶ್ವನಾಥ ಶೆಟ್ಟಿ ಕಂಗ್ವೆ, ಹರೀಶ್ ನಾಯಕ್, ಸಂತೋಷ್ ಕುಮಾರ್, ಮುಕುಂದ ಬಜತ್ತೂರು, ಸುರೇಶ್ ಅತ್ರಮಜಲು, ಧನಂಜಯ ನಟ್ಟಿಬೈಲು, ಅಝೀಝ್ ಬಸ್ತಿಕ್ಕಾರ್, ಪ್ರಶಾಂತ್ ನೆಕ್ಕಿಲಾಡಿ, ಯತೀಶ್ ಶೆಟ್ಟಿ ಸುವ್ಯ, ಎನ್. ಉಮೇಶ್ ಶೆಣೈ, ಚಂದ್ರಿಕಾ ಭಟ್, ಜಗದೀಶ್ ರಾವ್ ಮಣಿಕ್ಕಳ, ಯಶವಂತ ಜಿ., ಪ್ರಕಾಶ್ ಶೆಟ್ಟಿ ಬೆಳ್ಳಿಪ್ಪಾಡಿ, ಗುತ್ತಿಗೆದಾರರಾದ ಪ್ರಭಾಕರ ಶೆಟ್ಟಿ, ಫೈಝಲ್, ಇಲಾಖೆಯ ಇಂಜಿನಿಯರ್ ವಿಷ್ಣು ಕಾಮತ್, ರಾಕೇಶ್ ಕುಂದರ್, ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.