ಶತಾಯುಷಿ ಗುಡ್ಡಪ್ಪ ಗೌಡ ಬನ್ನೂರು ನಿಧನ

ಪುತ್ತೂರು: ಪ್ರಗತಿಪರ ಕೃಷಿಕ, ಬನ್ನೂರು ಗುತ್ತಿನ ದೈವದ ಪರಿಚಾರಕರಾಗಿದ್ದ ಶತಾಯುಷಿ, ಬನ್ನೂರು ನಿವಾಸಿ ಗುಡ್ಡಪ್ಪ ಗೌಡ (101) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಫೆ. 27ರಂದು ಬೆಳಿಗ್ಗೆ ನಿಧನರಾದರು.

ಊರ ಗೌಡತ್ತಿಗೆ ಮಾಡುತ್ತಿದ್ದ ಗುಡ್ಡಪ್ಪ ಗೌಡ ಅವರು ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು. ಹಿಂದೆ ಗುತ್ತಿಗೆದಾರರಾಗಿಯೂ ಕೆಲಸ ನಿರ್ವಹಿಸುತ್ತಿದ್ದರು. 72 ವರ್ಷ ಕಾಲ ಸುಖೀ ದಾಂಪತ್ಯ ಜೀವನ ನಡೆಸಿದ ಹಿನ್ನೆಲೆಯಲ್ಲಿ ಅಲುಂಬುಡ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಗಿತ್ತು. ಹಿಂದಿನ ವರ್ಷ ಗುಡ್ಡಪ್ಪ ಗೌಡ ಅವರ ಪತ್ನಿ ಲಕ್ಷ್ಮೀ ಅವರು ನಿಧನರಾಗಿದ್ದರು.

ಮೃತರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು, ಮೊಮ್ಮಕ್ಕಳನ್ನು, ಮರಿಮೊಮ್ಮಕ್ಕಳನ್ನು ಅಗಲಿದ್ದಾರೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top