ದೆಹಲಿ : ಕನ್ನಡ ಸಂಸ್ಕೃತಿ ಇಲಾಖಾ ಕಾರ್ಯ ವೈಖರಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ ಇಲಾಖಾ ಸಚಿವ ವಿ. ಸುನೀಲ್ ಕುಮಾರ್ ಅವರ ಬೆನ್ನುತಟ್ಟಿ ಅಭಿನಂದಿಸಿದರು. ಫೆ. 25 ರಂದು ದೆಹಲಿಯಲ್ಲಿ ನಡೆದ ದೆಹಲಿ ಕರ್ನಾಟಕ ಸಂಘದ 75ನೇ ವಾರ್ಷಿಕೋತ್ಸವದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕನ್ನಡ ರಾಜ್ಯೋತ್ಸವ ಸಂದರ್ಭ ನಡೆಸಿದ ಕೋಟಿ ಕಂಠ ಗೀತ ಗಾಯನ, ಅಮೃತಭಾರತಿಗೆ ಕನ್ನಡಧಾರತಿ ಮೊದಲಾದ ಯಶಸ್ವಿ ಕಾರ್ಯಕ್ರಮ ಸಂಘಟಿಸಿರುವ ಸಚಿವ ವಿ. ಸುನೀಲ್ ಕುಮಾರ್ ಇಲಾಖೆಯಲ್ಲಿ ಸಾಕಷ್ಟು ಪರಿವರ್ತನೆ ತಂದಿದ್ದರು. ಈ ಹಿಂದೆ ಮನ್ ಕಿ ಬಾತ್ನಲ್ಲೂ ಇಲಾಖೆಯ ಕಾರ್ಯವೈಖರಿ ಬಗ್ಗೆ ಪ್ರಧಾನಿ ಉಲ್ಲೇಖ ಮಾಡಿದ್ದರು.
ಎರಡು ದಿನ ದೆಹಲಿಯಲ್ಲಿ ಕನ್ನಡ ಕಲರವ ಕೇಳಿಸಲಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಏಕ್ ಭಾರತ ಶ್ರೇಷ್ಠ್ ಭಾರತ್ ಆಶಯಕ್ಕೆ ಅನುಗುಣವಾಗಿ, ಕರ್ನಾಟಕದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಇತಿಹಾಸವನ್ನು ಕೊಂಡಾಡಲು ಬಾರಿಸು ಕನ್ನಡ ಡಿಂಡಿಮವ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಲಾಗಿದೆ.