ಎಐಸಿಸಿ ಮಹಾ ಅಧಿವೇಶನ : ಪ್ರಿಯಾಂಕಾ ವಾದ್ರಾ ಸ್ವಾಗತಕ್ಕೆ ರಸ್ತೆಗೆ 6 ಟನ್ ಗುಲಾಬಿ ಹಾಕಿ ಸ್ವಾಗತ!

ರಾಯಪುರ : ಎಐಸಿಸಿ ಮಹಾ ಅಧಿವೇಶನದಲ್ಲಿ ಪಾಲ್ಗೊಳ್ಳಲೆಂದು ಫೆ.25ರಂದು ಛತ್ತೀಸ್‌ಗಢದ ರಾಯಪುರಕ್ಕೆ ಆಗಮಿಸಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಇತರ ನಾಯಕರನ್ನು ಸ್ವಾಗತಿಸಲು ಇಡೀ ರಸ್ತೆಯನ್ನೇ ಗುಲಾಬಿ ಹೂವಿನಿಂದ ಸಿಂಗರಿಸಲಾಗಿದೆ. ಸುಮಾರು 6 ಟನ್ ಗುಲಾಬಿ ಹೂಗಳಿಂದ ರಸ್ತೆ ಸಿಂಗರಿಸಲಾಗಿದೆ.

ಗುಲಾಬಿ ದಳಗಳಿಂದಾಗಿ ಇಡೀ ರಸ್ತೆ ಕೆಂಪಗೆ ಕಾಣುತ್ತಿರುವ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್‌ ಅವರು ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಾ ಅವರಿಗೆ ಪುಷ್ಪಗುಚ್ಛ ನೀಡಿ ಬರಮಾಡಿಕೊಂಡರು. ನಂತರ ಗುಲಾಬಿಯಿಂದ ಸಿಂಗರಿಸಿದ್ದ ರಸ್ತೆ ಮೂಲಕ ಪ್ರಿಯಾಂಕಾ ವಾದ್ರಾ ಅವರನ್ನು ಕರೆತಂದರು. ಸುಮಾರು ಎರಡು ಕಿ.ಮೀ.ವರೆಗೆ ರಸ್ತೆಯನ್ನು ಅಲಂಕರಿಸಲು 6,000 ಕೆಜಿಗೂ ಹೆಚ್ಚು ಗುಲಾಬಿಗಳನ್ನು ಬಳಸಲಾಯಿತು, ಅಲ್ಲಿ ವರ್ಣರಂಜಿತ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿದ ಜಾನಪದ ಕಲಾವಿದರು ಮಾರ್ಗದ ಉದ್ದಕ್ಕೂ ನಿರ್ಮಿಸಲಾದ ಉದ್ದನೆಯ ವೇದಿಕೆಯಲ್ಲಿ ಪ್ರದರ್ಶನ ನೀಡಿದರು.

ಕಾಂಗ್ರೆಸ್‌ನ 85ನೇ ಮಹಾ ಅಧಿವೇಶನವು ರಾಯಪುರದಲ್ಲಿ ಶುಕ್ರವಾರದಿಂದ ಆರಂಭವಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಇದರ ಅಧ್ಯಕ್ಷತೆ ವಹಿಸಿದ್ದಾರೆ. ಕಾಂಗ್ರೆಸ್‌ ಸಂಚಾಲನಾ ಸಮಿತಿ ಸಭೆ ಫೆ.24ರಂದು ಬೆಳಗ್ಗೆ ನಡೆಯಿತು. ಈ ಸಭೆಗೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಹಾಜರಾಗಿರಲಿಲ್ಲ. ಇಂದು ನಡೆಯುತ್ತಿರುವ ಮಹಾ ಅಧಿವೇಶನದಲ್ಲಿ ಮೂವರೂ ಭಾಗವಹಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top