ಬೆಳೆವಿಮೆ ಸಾಫ್ಟ್’ವೇರ್ ದೋಷಕ್ಕೆ ಶಾಸಕರಿಂದ ಪರಿಹಾರ | ಸಂಜೀವ ಮಠಂದೂರಿಗೆ ಅಭಿನಂದನೆ ಸಲ್ಲಿಸಿದ ಬನ್ನೂರು ರೈತರ ಸೇವಾ ಸಹಕಾರಿ ಸಂಘ

ಪುತ್ತೂರು: ಬೆಳೆವಿಮೆ ಸಾಫ್ಟ್’ವೇರ್ ನಲ್ಲಿ ರೈತರ ದಾಖಲೆ ಎಂಟ್ರಿ ಸಂದರ್ಭ ಎದುರಾಗುತ್ತಿದ್ದ ತಾಂತ್ರಿಕ ದೋಷವನ್ನು ಪರಿಹರಿಸುವಲ್ಲಿ ಶಾಸಕ ಸಂಜೀವ ಮಠಂದೂರು ಅವರ ಕ್ರಮ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಬೆಳೆವಿಮೆ ಸಾಫ್ಟ್’ವೇರ್ ಗೆ ದಾಖಲೆಗಳ ನೋಂದಣಿ ಮಾಡುವಾಗ, 3-4 ಸರ್ವೆ ನಂಬರ್ ಬದಲಿಗೆ ಒಂದು ಸರ್ವೆ ನಂಬರನ್ನು ಮಾತ್ರ ಆಯ್ಕೆ ಮಾಡಲು ಆಗುತ್ತಿತ್ತು. ಅಂದರೆ ರೈತರ ಒಂದು ಸರ್ವೆ ನಂಬರ್ ಬಿಟ್ಟು, ಉಳಿದ ಸರ್ವೆ ನಂಬರ್‍ಗಳು ದಾಖಲಾಗುತ್ತಿರಲಿಲ್ಲ. ಮಾತ್ರವಲ್ಲ, ಆಧಾರ್ ಮತ್ತು ಆರ್.ಟಿ.ಸಿ. ಮತ್ತು ಆಧಾರದಲ್ಲಿ ಹೆಸರಿನಲ್ಲಿ ಸಣ್ಣ ಲೋಪಗಳಿದ್ದರೂ, ಟ್ಯಾಲಿ ಬರುತ್ತಿರಲಿಲ್ಲ. ಇದೇ ರೀತಿಯ ಹಲವಾರು ತಾಂತ್ರಿಕ ತೊಂದರೆ ಎದುರಾಗುತ್ತಿತ್ತು.

ಇದರ ಬಗ್ಗೆ ಶಾಸಕ ಸಂಜೀವ ಮಠಂದೂರು ಅವರು ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರನ್ನು ಭೇಟಿಯಾಗಿ ಸಮಸ್ಯೆಯ ಗಂಭೀರತೆಯನ್ನು ತಿಳಿಸಿದ್ದರು. ಮಾತ್ರವಲ್ಲ, ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆಯ ತೀವ್ರತೆಯನ್ನು ತಿಳಿಸಿ, ಸಮಸ್ಯೆ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ತಾಂತ್ರಿಕ ದೋಷಗಳು ಸರಿ ಹೋಗಿವೆ. ಮಾತ್ರವಲ್ಲ, ಮೊದಲು ಒಂದು ಆರ್.ಟಿ.ಸಿ.ಯನ್ನು ಮಾತ್ರ ಅಪ್‍ಲೋಡ್ ಮಾಡಲು ಆಗುತ್ತಿತ್ತು. ಈಗ ಒಂದೇ ಸಮಯದಲ್ಲಿ ಕುಟುಂಬದ ಅನೇಕ ಆರ್.ಟಿ.ಸಿ.ಗಳನ್ನು ಅಪ್‍ಲೋಡ್ ಮಾಡಲು ಆಗುತ್ತಿದೆ.



































 
 

ಕೃಷಿ ಅಭಿವೃದ್ಧಿ ಸಾಲ ಸೌಲಭ್ಯ ವಿತರಣೆ ಸಂದರ್ಭದಲ್ಲಿ ನೋಂದಾವಣೆಯ ವ್ಯತ್ಯಾಸ ಉಂಟಾಗುತ್ತಿತ್ತು. ಇದೀಗ ಈ ಸಮಸ್ಯೆಯೂ ಬಗೆಹರಿದಿದ್ದು, ಸಹಕಾರಿ ಸಂಘಗಳಲ್ಲಿ ಕೃಷಿ ಅಭಿವೃದ್ಧಿ ಸಾಲದ ನೋಂದಾವಣೆ ಕಾರ್ಯ ಸರಾಗವಾಗಿ ನಡೆಯುತ್ತಿದೆ.

ಅಲ್ಪಾವಧಿ ಕೃಷಿ ಸಾಲದಲ್ಲಿ ಶೂನ್ಯ ಬಡ್ಡಿ ದರ:

ಇದುವರೆಗೆ 20 ಸಾವಿರ ರೂ. ಮಾಸಿಕ ವೇತನ ಅಥವಾ ಪಿಂಚಣಿ ಪಡೆಯುವ ರೈತರಿಗೆ ಹಾಗೂ 3 ವರ್ಷದಿಂದ ಆದಾಯ ತೆರಿಗೆ ಪಾವತಿಸಿದ ರೈತರಿಗೆ ಸಹಕಾರಿ ಸಂಸ್ಥೆಗಳ ನಿವ್ವಳ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ.ವರೆಗಿನ ಅಲ್ಪಾವಧಿ ಕೃಷಿ ಸಾಲದಲ್ಲಿ ಶೂನ್ಯ ಬಡ್ಡಿ ದರ ದೊರೆಯುತ್ತಿರಲಿಲ್ಲ. ಶಾಸಕ ಸಂಜೀವ ಮಠಂದೂರು ಅವರು ಸರಕಾರದ ಮೇಲೆ ಒತ್ತಡ ತಂದು, ಈ ಆದೇಶವನ್ನು ಹಿಂದೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ರೈತರ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ಕಲ್ಪಿಸಿಕೊಟ್ಟ ಶಾಸಕ ಸಂಜೀವ ಮಠಂದೂರು ಅವರ ಕಾರ್ಯವೈಖರಿಯನ್ನು ಮೆಚ್ಚು, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಪದಾಧಿಕಾರಿಗಳು ಶಾಸಕರನ್ನು ಅಭಿನಂದಿಸಿದರು.

ಶಾಸಕರ ಕಾರ್ಯದಿಂದ ರಾಜ್ಯಕ್ಕೆ ಉಪಯೋಗ

ಹಿಂದೆ ಕಾವೇರಿ ಆ್ಯಪ್ ಇತ್ತು. ಅದರಿಂದ ಈಗಿನ ವೆಬ್‍ಸೈಟ್ ಕಾವೇರಿ-ಫ್ರುಟ್ಸ್ ಇದಕ್ಕೆ ವರ್ಗಾಯಿಸುವಾಗ ಆದ ತಾಂತ್ರಿಕ ದೋಷಗಳಿಂದ ಜನರಿಗೆ ತೊಂದರೆ ಆಗುತ್ತಿತ್ತು. ಕೆಲ ವ್ಯತ್ಯಾಸಗಳಿಂದಾಗಿ ವೆಬ್‍ಸೈಟಿಗೆ ದಾಖಲೆ ಅಪ್‍ಲೋಡ್ ಮಾಡುವಾಗ ಎರರ್ ತೋರಿಸುತ್ತಿತ್ತು. ಇದನ್ನು ಗಮನಿಸಿದ ಶಾಸಕ ಸಂಜೀವ ಮಠಂದೂರು ಅವರು, ತಾವೇ ಖುದ್ದಾಗಿ ಸಹಕಾರಿ ಸಚಿವರನ್ನು ಭೇಟಿಯಾಗಿ ಸಮಸ್ಯೆಯನ್ನು ಅವರ ಗಮನಕ್ಕೆ ತಂದರು. 1 ವಾರ ಇದಕ್ಕಾಗಿ ಓಡಾಡಿದರು. ಪರಿಣಾಮ, ಒಂದೇ ವಾರದಲ್ಲಿ ವೆಬ್‍ಸೈಟಿನ ತಾಂತ್ರಿಕ ದೋಷ ಸರಿಯಾಯಿತು. ಮೊದಲು ಒಂದು ಕುಟುಂಬದ ಒಂದು ಆರ್.ಟಿ.ಸಿ.ಯನ್ನು ಮಾತ್ರ ಅಪ್‍ಲೋಡ್ ಮಾಡಲು ಆಗುತ್ತಿತ್ತು. ಆದರೆ ಶಾಸಕ ಸಂಜೀವ ಮಠಂದೂರು ಅವರ ಮುತುವರ್ಜಿಯಿಂದಾಗಿ, ಒಂದು ಕುಟುಂಬದ ಹಲವು ಆರ್.ಟಿ.ಸಿ.ಗಳನ್ನು ಅಪ್‍ಲೋಡ್ ಮಾಡಲು ಆಗುತ್ತದೆ. ರಾಜ್ಯದ ಯಾವ ಶಾಸಕರ ಗಮನಕ್ಕೆ ಬಾರದ ಸಮಸ್ಯೆಯೊಂದನ್ನು, ಸಂಜೀವ ಮಠಂದೂರು ಅವರು ಪರಿಹರಿಸಿಕೊಟ್ಟಿದ್ದಾರೆ. ಇದರ ಪ್ರಯೋಜನ ಪುತ್ತೂರಿಗೆ ಮಾತ್ರವಷ್ಟೇ ಅಲ್ಲ, ರಾಜ್ಯಕ್ಕೆ ಲಭಿಸಲಿದೆ.

ಮೋಹನ್ ಪಕ್ಕಳ, ನಿರ್ದೇಶಕರು, ಬನ್ನೂರು ರೈತರ ಸೇವಾ ಸಹಕಾರಿ ಸಂಘ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top