ಕಾವು : ಮಾಡ್ನೂರು ಗ್ರಾಮದ ಸಸ್ಪೆಟ್ಟಿ ಎಂಬಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟಿನಿಂದ ಬೆಂಕಿ ಹತ್ತಿಕೊಂಡು ಅರ್ಧ ಎಕ್ರೆ ಜಾಗದಲ್ಲಿರುವ ಗೇರು ಮರಗಳು ಸುಟ್ಟು ಹೋಗಿ ನಷ್ಟ ಉಂಟಾದ ಘಟನೆ ನಡೆದಿದೆ.

ರಾಮಕೃಷ್ಣ ಭಟ್ ಎಂಬವರ ಜಾಗದಲ್ಲಿ ಸುತ್ತಲು ಹುಲ್ಲು ಪೊದೆಗಳು ಬೆಳೆದಿದ್ದು, ಹಠಾತ್ತನೇ ವಿದ್ಯುತ್ ಪರಿವರ್ತಕದಲ್ಲಿ ಶಾರ್ಟ್ ಸರ್ಕ್ಯೂಟಿನಿಂದ ಉಂಟಾದ ಪರಿಣಾಮ ಪೊದೆಗಳಿಗೆ ಬೆಂಕಿ ಹಿಡಿದು ಗೇರು ಮರಗಳನ್ನು ಆವರಿಸಿದೆ.

ಅಗ್ನಿಶಾಮಕ ದಳದವರಿಗೆ ಕರೆ ಮಾಹಿತಿ ತಿಳಿಸಲಾಯಿತು. ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದವರು ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಕರೆಗೆ ತಕ್ಷಣ ಸ್ಪಂದಿಸಿದ ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯ ವೈಖರಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಯಿತು.