ಕಡಬ: ಕುದ್ಮಾರು ಬೇರಿಕೆ ಶ್ರೀ ನಾಗಬ್ರಹ್ಮ ಆದಿಮುಗೇರ್ಕಳ ಮತ್ತು ಕೊರಗಜ್ಜ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಪ್ರಯುಕ್ತ ಫೆ. 25ರಂದು ಸಂಜೆ ಧಾರ್ಮಿಕ ಸಭೆ ನಡೆಯಿತು.
ಬೇರಿಕೆ ಶ್ರೀ ನಾಗಬ್ರಹ್ಮ ಆದಿಮುಗೇರ್ಕಳ ದೈವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್ ಕೆ.ಎನ್. ಕಾರ್ಲಾಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರದೀಪ್ ಆರ್. ಗೌಡ ಅರುವಗುತ್ತು ಉದ್ಘಾಟಿಸಿದರು.
ಇದೇ ಸಂದರ್ಭ ಭಾರತೀಯ ಭೂಸೇನೆಯ ಮಾಜಿ ಸುಬೇದಾರ್ ರವಿಚಂದ್ರ ಮಾರ್ಕಜೆ, ಭಾರತೀಯ ಭೂಸೇನೆಯ ಮಾಜಿ ಸೈನಿಕರಾದ ರಾಮಕೃಷ್ಣ ಎಂ., ತನಿಯಪ್ಪ ನಾಯ್ಕ ಕಾರ್ಲಾಡಿ, ಭಾರತೀಯ ಭೂಸೇನೆಯ ಅಗ್ನಿವೀರ್ ಪಥ್ ಭವನ್ ಕುಮಾರ್ ಎ.ಕೆ., ಕೇಶವ ಗೌಡ ಅಮೈ, ಲಿಮ್ಕಾ ದಾಖಲೆಯ ವಿಜೇತೆ ರಾಶಿ ಚಂದ್ರಶೇಖರ್ ಹಾಗೂ ಆದಿಮುಗೇರ್ಕಳ ನಾಗ್ರಬ್ರಹ್ಮ ದೈವಸ್ಥಾನದ ಅಧ‍್ಯಕ್ಷ ಹರೀಶ್ ಬೇರಿಕೆ ಅವರನ್ನು ಸನ್ಮಾನಿಸಲಾಯಿತು. ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ, ಬೆಳಂದೂರು ಗ್ರಾ.ಪಂ. ಸದಸ್ಯೆ ತಾರಾ ಅನ್ಯಾಡಿ, ಕೆಲಂಬೀರಿ ಬ್ರಹ್ಮಬೈದೇರುಗಳ ಗರಡಿ ಆಡಳಿತ ಸಮಿತಿ ಅಧ‍್ಯಕ್ಷ ವಸಂತ ಬಿ.ಎ., ಬೇರಿಕೆ ಶ್ರೀ ನಾಗಬ್ರಹ್ಮ ಆದಿಮುಗೇರ್ಕಳ ದೈವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷ ರಮೇಶ್ ಬೇರಿಕೆ ಅವರು ಸನ್ಮಾನಿಸಿದರು.
ಧಾರ್ಮಿಕ ಕಾರ್ಯಕ್ರಮ:
ಬೆಳಿಗ್ಗೆ ಗಣಹೋಮ, ಶುದ್ಧ ಕಲಶ ತಂಬಿಲ ನಡೆದು ಸಂಜೆ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ದೈವದ ಭಂಡಾರ ತೆಗೆಯಲಾಯಿತು. ರಾತ್ರಿ ಧಾರ್ಮಿಕ ಸಭೆ ಹಾಗೂ ಸನ್ಮಾನ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ಗರಡಿ ಇಳಿದು, ತನ್ನಿ ಮಾಣಿಗ ಗರಡಿ ಇಳಿಯಲಿದೆ. ಫೆ. 26ರಂದು ಬಳಿಗ್ಗೆ ಹರಕೆ ಮತ್ತು ಗಂಧಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಗುಳಿಗ ದೈವದ ನೇಮೋತ್ಸವ, ಕೊರಗಜ್ಜ ದೈವದ ನೇಮೋತ್ಸವ ಮತ್ತು ಕೊರಗಜ್ಜನ ಹರಕೆ ನೇಮೋತ್ಸವ ನಡೆಯಲಿದೆ.