ಬಂಟ ಸಮಾಜಕ್ಕೆ ನಿಗಮ, ಮೀಸಲಾತಿಯನ್ನು 3 ಬಿಯಿಂದ 2 ಎಗೆ ವರ್ಗಾಯಿಸಬೇಕು | ಬಿಜೆಪಿ ರಾಜ್ಯಾಧ್ಯಕ್ಷರ ಮೂಲಕ ಮುಖ್ಯಮಂತ್ರಿಗಳಿಗೆ ಬಂಟರ ಸಂಘಗಳ ಒಕ್ಕೂಟದಿಂದ ಬೇಡಿಕೆ ಸಲ್ಲಿಕೆ

ಮಂಗಳೂರು : ಬಂಟ ಸಮಾಜಕ್ಕೆ ನಿಗಮ, ಮೀಸಲಾತಿಯನ್ನು 3 ಬಿ ಯಿಂದ 2ಎಗೆ ವರ್ಗಾಯಿಸಬೇಕು ಎಂಬ ಬೇಡಿಕೆಯ ಮನವಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ. ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಉತ್ತರ ನೀಡಲಿದ್ದೇವೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‍ ಶೆಟ್ಟಿ ಹೇಳಿದ್ದಾರೆ.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಶುಕ್ರವಾರ ಮಂಗಳೂರಿನ ಬಂಟ್ಸ್ ಹಾಸ್ಟೇಲ್‍ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಎಲ್ಲಾ ಸಮಾಜಕ್ಕೂ ನಿಗಮ, ಸರಕಾರದಿಂದ ಸೌಲಭ್ಯ ದೊರೆಯುತ್ತಿದೆ. ಆದರೆ ಬಂಟರಿಗೆ ಸಹಕಾರ ನಿಗಮ ಬಂದಿಲ್ಲ. ಈ ನಿಟ್ಟಿನಲ್ಲಿ ನಾವು ಹೋರಾಟವನ್ನೂ ಮಾಡಿಲ್ಲ. ನಮಗೆ ಶಕ್ತಿ ಇಲ್ಲ ಎಂದರ್ಥವಲ್ಲ ಎಂದ ಅವರು, ಬಂಟ ಸಮಾಜದ ಐದು ಮಂದಿ ಶಾಸಕರಿದ್ದು, ಅವರೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕಿತ್ತು. ಇದಕ್ಕಾಗಿ ನಮ್ಮ ಅಗತ್ಯವಿರಲಿಲ್ಲ. ಈಗ ನಮ್ಮ ನಾಯಕರನ್ನು ಸಮಾಜ ಪ್ರಶ್ನಿಸುತ್ತಿದೆ. ಕಾಂಗ್ರೆಸ್‍ ಪಣಾಳಿಕೆಯಲ್ಲಿ ಬಂಟರು, ಬ್ರಾಹ್ಮಣರಿಗೂ ನಿಗಮದ ಭರವಸೆ ನೀಡಲಾಗಿದೆ. ಸರಕಾರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ಮೇಲ್ನೋಟಕ್ಕೆ ಬಂಟ ಸಮುದಾಯ ಶ್ರೀಮಂತರಂತೆ ಕಂಡರೂ ಶೇ.25 ರ ಷ್ಟು ಮಂದಿ ಮಧ್ಯಮ ಮತ್ತು ಬಡತನ ರೇಖೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇರುವರೆಗೂ ಬಂಟ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿಯನ್ನು ಯಾವುದೇ ಆಡಳಿತ ಪಕ್ಷ ನೀಡಿಲ್ಲ. ಎಂದು ತಿಳಿಸಿದರು.



































 
 

ಬಿಲ್ಲವ ಸಮಾಜಕ್ಕೆ ನಿಗಮ ಆಗಿರುವುದು ಸಂತೋಷ. ಅವರಿಗೆ ಶಾಸಕರು, ಸಚಿವರು ಬೆಂಬಲ ನೀಡಿದ್ದಾರೆ. ಆದರೆ ನಮ್ಮವರು ಏನು ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ರಸ್ತೆ ವಿಚಾರದಲ್ಲಿ ಸುಂದರ ಶೆಟ್ಟಿಯವರ ಹೆಸರು ಬಂದಾಗ ಎಲ್ಲಾ ಬಂಟರೂ ಒಗ್ಗಟ್ಟಾಗಿದ್ದರು. ವಿಶ್ವದಾದ್ಯಂತ ಇರುವ ಬಂಟರನ್ನು ತರಿಸಿ ಪ್ರತೀ ಕ್ಷೇತ್ರದಲ್ಲೂ ಓರ್ವ ಬಂಟ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಗೆಲ್ಲುವ ಅಭ್ಯರ್ಥಿಗಳನ್ನು ಸೋಲಿಸುವ ಸಾಮರ್ಥ್ಯ ನಮಗಿದೆ ಎಂದು ಹೇಳಿದರು.

ನಾನು ಎಂದೋ ಚುನಾವನೆಗೆ ನಿಂತಿದ್ದರೆ ಶಾಸಕ, ಸಚಿವನಾಗುತ್ತಿದೆ. ಹಾಲಾಡಿಯವರನ್ನು ಹೊರತುಪಡಿಸಿ ಇತರ ಎಲ್ಲರೂ ನನಗಿಂತ ಕಿರಿಯರಾಗಿದ್ದು, ನಾನು ಬೆಂಬಲ ನೀಡಿದ್ದೇನೆ. ಈಗ ನನಗೆ ವಯಸ್ಸಾಗಿದೆ. ನಮ್ಮ ಸಮುದಾಯವನ್ನು ಬೆಂಬಲಿಸುವವರಿಗೆ ನಾವು ಬೆಂಬಲ ನೀಡುತ್ತೇವೆ ಎಂದರು.

ಪಡುಬಿದ್ರೆ ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಒಂದು ಅಭ್ಯರ್ಥಿಯನ್ನು ಗೆಲ್ಲಿಸುವ, ಸೋಲಿಸುವ ಶಕ್ತಿ ಬಂಟ ಸಮಾಜಕ್ಕಿದೆ. ಸಮಾಜದ ಐದು ಮಂದಿ ಶಾಸಕರು ಸಕಾಜದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಯಾವ ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸುತ್ತದೋ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನ್‍ದಾಸ್‍ ಶೆಟ್ಟಿ, ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರವೀಣ್‍ ಭೋಜ ಶೆಟ್ಟಿ, ಕರಾವಳಿ ಭಾಗರ ವಿವಿಧ ಕ್ಷೇತ್ರಗಳ ಬಂಟರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top