ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್‌ನ ಉಪಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಯತೀಶ ಡಿ.ಬಿ. ಅವರ ಪರವಾಗಿ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಅವರು ಅಂತಿಮ ಹಂತದ ಚುನಾವಣಾ ಪ್ರಚಾರ ನಡೆಸಿದರು.


ಆರ್ಯಾಪು ಗ್ರಾ.ಪಂ.ನ ೪ನೇ ವಾರ್ಡ್‌ನ ಮತದಾರರನ್ನು ಭೇಟಿಯಾದ ಬೂಡಿಯಾರ್ ರಾಧಾಕೃಷ್ಣ ರೈ ಅವರು, ಉಪಚುನಾವಣೆಯಲ್ಲಿ ಟೇಬಲ್ ಗುರುತಿಗೆ ಮತ ಚಲಾಯಿಸುವಂತೆ ಮನವಿ ಮಾಡಿಕೊಂಡರು.
ಮನೆ ಭೇಟಿ, ಅಂಗಡಿ ಮೊದಲಾದೆಡೆ ಮತದಾರರನ್ನು ಭೇಟಿಯಾದ ಅವರು, ಬಿರುಸಿನ ಪ್ರಚಾರ ನಡೆಸಿದರು.