ಪುತ್ತೂರು : ಪುತ್ತೂರು ರೋಟರಿ ಕ್ಲಬ್ ಹಾಗೂ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಜಂಟಿ ಆಶ್ರಯದಲ್ಲಿ “ರೋಟರಿ ಪುತ್ತೂರು ಸೇವಾ ಉತ್ಸವ್” ಫೆ.24 ಶುಕ್ರವಾರ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಸುಕೃತೀಂದ್ರ ಕಲಾಮಂದಿರದಲ್ಲಿ ನಡೆಯಲಿದೆ.
ಪ್ರಪ್ರಥಮ ಬಾರಿಗೆ ಒಂದೇ ಸೂರಿನಡಿ ವಿವಿಧ ವೈದ್ಯಕೀಯ ಸೌಲಭ್ಯಗಳು ಮತ್ತು ಸೇವಾ ಯೋಜನೆಗಳ ಕಾರ್ಯಕ್ರಮ ಇದಾಗಿದ್ದು, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ರ ತನಕ ನಡೆಯಲಿದೆ.
ಕಾರ್ಯಕ್ರಮದಲ್ಲಿ ಉಚಿತ ವೈದ್ಯಕೀಯ ಸೌಲಭ್ಯಗಳಾದ ಕಣ್ಣಿ ತಪಾಸಣೆ, ಸಲಹೆ, ದಂತ ತಪಾಸಣೆ, ಚಿಕಿತ್ಸೆ, ರಕ್ತದೊತ್ತಡ, ಮಧುಮೇಹ ತಪಾಸಣೆ, ಥೈರಾಯಿಡ್ ಹಾರ್ಮೋನ್ ತಪಾಸಣೆ, ಎಲುಬು ಸಾಂಧ್ಯತೆ ತಪಾಸಣೆ ಲಭ್ಯವಿದೆ. ಸೇವಾ ಯೋಜನೆಗಳಾದ ಉಚಿತ ಗಾಲಿ ಕುರ್ಚಿಗಳು, ಕೃತಕ ಕಾಲುಗಳು, ಕ್ಷಯರೋಗಿಗಳಿಗೆ ಪೌಷ್ಠಿಕಾಂಶ ಆಹಾರ ಹಾಗೂ ಪರ್ಲಡ್ಕ ಪ್ರಾಥಮಿಕ ಶಾಲೆಗೆ ಚೆಂಚುಗಳ ಹಸ್ತಾಂತ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.